ಕನಕಪುರ: ತಾಲ್ಲೂಕಿನ ಬೂದಿಗುಪ್ಪೆ ಗ್ರಾಮದಲ್ಲಿ ಕಳ್ಳರು ಮನೆಯ ಬಾಗಿಲು ಮುರಿದು ಚಿನ್ನಾಭರಣ ಮತ್ತು ನಗದು ಕಳ್ಳತನವಾಗಿದೆ.
ಕಸಬಾ ಹೋಬಳಿ ಬೂದಿಗುಪ್ಪೆ ಗ್ರಾಮದ ಸರಸ್ವತಿ ಎಂಬುವವರು ಮೇ 9 ರಂದು ಮಗಳ ಮನೆಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಕಳ್ಳರು ರಾತ್ರಿ ವೇಳೆ ಮನೆಯ ಬೀಗ ಒಡೆದು ಮನೆಗೆ ನುಗ್ಗಿದ್ದಾರೆ.
60 ಗ್ರಾಂ ತೂಕದ ಮಾಂಗಲ್ಯ ಸರ, 10 ಗ್ರಾಂ ತೂಕದ ಚಿನ್ನದ ಸರ, 30 ಗ್ರಾಂ ತೂಕದ 4 ಜೊತೆ ಚಿನ್ನದ ಓಲೆ, ಬೆಳ್ಳಿ ವಸ್ತು ಹಾಗೂ ₹80 ಸಾವಿರ ನಗದು ಕಳ್ಳತನ ಮಾಡಿದ್ದಾರೆ. ಸರಸ್ವತಿ ಮೇ 14 ರಂದು ಮನೆಗೆ ವಾಪಸ್ ಬಂದಾಗ ಕಳ್ಳತನ ಆಗಿರುವುದು ಗೊತ್ತಾಗಿದೆ.
ಈ ಸಂಬಂಧ ಅವರು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.