ADVERTISEMENT

ಕನಕಪುರ | ಪತ್ರ ಬರೆದು ಮನೆ ಬಿಟ್ಟು ಹೋದೆ ವಿದ್ಯಾರ್ಥಿ

​ಪ್ರಜಾವಾಣಿ ವಾರ್ತೆ
Published 2 ಮೇ 2025, 16:00 IST
Last Updated 2 ಮೇ 2025, 16:00 IST
ತೇಜಸ್
ತೇಜಸ್   

ಕನಕಪುರ: ಇಲ್ಲಿನ ಎಸ್.ಎನ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ‘ತಾನು ಎಂಟು ವರ್ಷಗಳ ನಂತರ ಮನೆಗೆ ಬರುತ್ತೇನೆ’ ಎಂದು ಪತ್ರ ಬರೆದಿಟ್ಟು ಮನೆ ಬಿಟ್ಟು ಹೋಗಿರುವ ಘಟನೆ ನಗರದಲ್ಲಿ ನಡೆದಿದೆ.

ನಗರದ ದಾಳೇಗೌಡ ಅವರ ಮಗ ತೇಜಸ್ (14) ಮನೆ ಬಿಟ್ಟು ಹೋದ ಬಾಲಕ.

ಶಾಲೆಗೆ ರಜೆ ಇರುವುದರಿಂದ ಮನೆಯಲ್ಲೇ ಇದ್ದ ಬಾಲಕ, ‘ಎಂಟು ವರ್ಷಗಳ ನಂತರ ನಾನೇ ಮನೆಗೆ ಬರುತ್ತೇನೆ. ನನ್ನನ್ನು ಹುಡುಕಬೇಡಿ. ನೀವು ಹುಡುಕುವ ಪ್ರಯತ್ನ ಮಾಡಿದರೆ ನಾನು ಸತ್ತ ಹಾಗೆ ಎಂದು ಭಾವಿಸಿ ಎಂದು ಪತ್ರ ಬರೆದಿಟ್ಟು ಬುಧವಾರ ಮನೆ ಬಿಟ್ಟು ಹೋಗಿದ್ದಾನೆ’.

ADVERTISEMENT

ಮಗನನ್ನು ಹುಡುಕಿಕೊಡಿ ಎಂದು ಬಾಲಕನ ತಂದೆ ಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.