ADVERTISEMENT

ಕಂಚನಹಳ್ಳಿ: ಇಂದು ದೇವರ ಉತ್ಸವ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2022, 7:16 IST
Last Updated 24 ಏಪ್ರಿಲ್ 2022, 7:16 IST
ಕಂಚನಹಳ್ಳಿಯಲ್ಲಿ ಶನಿವಾರ ಪ್ರಾರಂಭಗೊಂಡ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಸೌದೆ ತುಂಬಿದ ಎತ್ತಿನಗಾಡಿಗೆ ಪೂಜೆ ನೆರವೇರಿಸಲಾಯಿತು
ಕಂಚನಹಳ್ಳಿಯಲ್ಲಿ ಶನಿವಾರ ಪ್ರಾರಂಭಗೊಂಡ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಸೌದೆ ತುಂಬಿದ ಎತ್ತಿನಗಾಡಿಗೆ ಪೂಜೆ ನೆರವೇರಿಸಲಾಯಿತು   

ಕನಕಪುರ: ತಾಲ್ಲೂಕಿನ ಸಾತನೂರು ಹೋಬಳಿಯ ಕಂಚನಹಳ್ಳಿಯಲ್ಲಿ ಬಸವೇಶ್ವರಸ್ವಾಮಿ, ಕಣಿವೆ ಆಂಜನೇಯ ಸ್ವಾಮಿ, ಚಿಕ್ಕಮ್ಮದೇವಿ ಜಾತ್ರಾ ಮಹೋತ್ಸವ ಏ. 23ರಿಂದ 30ರವರೆಗೆ ನಡೆಯಲಿದೆ.

ಜಾತ್ರೆಯು ಶನಿವಾರ ಪ್ರಾರಂಭವಾಗಿದ್ದು, ರಾತ್ರಿ ಸೌದೆ ತುಂಬಿದ ಎತ್ತಿನ ಗಾಡಿಯ ಮೆರವಣಿಗೆ ನೆರವೇರಿತು ಭಾನುವಾರ ಬಸವೇಶ್ವರ ಕೊಂಡ ತೆಗೆಯಲು ಪೂಜೆ ನೆರವೇರಲಿದೆ. ಸೋಮವಾರ ಪಾನಕದ ಬಂಡಿ ಮೆರವಣಿಗೆ ನಡೆಯಲಿದೆ. ಮಂಗಳವಾರ ಬಸವೇಶ್ವರ ಸ್ವಾಮಿ ಕೊಂಡೋತ್ಸವವಿದೆ ಬುಧವಾರ ಸಾಮೂಹಿಕ ಅನ್ನಸಂತರ್ಪಣೆ ನಡೆಯಲಿದೆ. ಗುರುವಾರ ಭೀಮನಕಿಂಡಿ ಬೆಟ್ಟದ ಬಸವೇಶ್ವರಸ್ವಾಮಿಗೆ ಚಿನ್ನಾಭರಣ ಧರಿಸಿ, ಸಂಜೆ ಗ್ರಾಮದಲ್ಲಿ ತೆಗೆದಿರುವ ಬಸವೇಶ್ವರ ಕೊಂಡವನ್ನು ಮುಚ್ಚಲಾಗುತ್ತದೆ.

ಶುಕ್ರವಾರ ಬೆಳಿಗ್ಗೆ ಚಿಕ್ಕಮ್ಮ ದೇವಿ ಕರಗ ಮಹೋತ್ಸವ ನಡೆಯಲಿದೆ. ಶನಿವಾರ ಗ್ರಾಮದ ಕಣಿವೆ ಆಂಜನೇಯ ಸ್ವಾಮಿ ದೇವರ ಉತ್ಸವ ಜರುಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.