ADVERTISEMENT

ರಾಮನಗರ: ದೇಗುಲದಲ್ಲೇ ಕರಗ ಆಚರಣೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 13:28 IST
Last Updated 7 ಜುಲೈ 2020, 13:28 IST
ಚಾಮುಂಡೇಶ್ವರಿ ದೇವರ ಮೂರ್ತಿಗೆ ಮಂಗಳವಾರ ವಿಶೇಷ ಅಲಂಕಾರ ಮಾಡಲಾಗಿತ್ತು
ಚಾಮುಂಡೇಶ್ವರಿ ದೇವರ ಮೂರ್ತಿಗೆ ಮಂಗಳವಾರ ವಿಶೇಷ ಅಲಂಕಾರ ಮಾಡಲಾಗಿತ್ತು   

ರಾಮನಗರ: ನಗರದ ಶಕ್ತಿದೇವತೆಗಳ ಸಾಂಪ್ರದಾಯಿಕ ಕರಗ ಮಹೋತ್ಸವವು ಮಂಗಳವಾರ ಆಯಾ ದೇಗುಲಗಳ ಆವರಣದಲ್ಲಿ ಸರಳವಾಗಿ ನೆರವೇರಿತು.

ಚಾಮುಂಡೇಶ್ವರಿ, ಮಗ್ಗದಕೆರೆ ಮಾರಮ್ಮ, ಭಂಡಾರಮ್ಮ, ಬಿಸಲು ಮಾರಮ್ಮ, ಕೊಂಕಾಣಿದೊಡ್ಡಿ, ಐಜೂರು ಶೆಟ್ಟಿಹಳ್ಳಿ ಬೀದಿ ಆದಿಶಕ್ತಿ, ಮುತ್ತುಮಾರಮ್ಮ ಅಮ್ಮನವರ ಕರಗಗಳು ನಡೆದವು. ಬೆಳಗ್ಗೆ ದೇವಾಲಯಗಳಲ್ಲಿ ಮಡಿ ನೀರು ಕರಗ ಜರುಗಿತು. ಸಂಜೆ ಹೂವಿನ ಕರಗ ಜರುಗಿತು. ದೇವರ ಮೂರ್ತಿಗಳಿಗೆ ವಿಶೇಷ ಪೂಜೆ ಮತ್ತು ಅಲಂಕಾರ ಏರ್ಪಡಿಸಲಾಗಿತ್ತು. ರಾತ್ರಿ ಮಹಿಳೆಯರು ತಂಬಿಟ್ಟಿನ ಆರತಿ ಬೆಳಗಿದರು. ದಿನವಿಡೀ ಭಕ್ತರು ಭೇಟಿ ನೀಡಿದರು.

ಚಾಮುಂಡೇಶ್ವರಿ ದೇಗುಲದಲ್ಲಿ ದೇವಿಯ ಮೂರ್ತಿಗೆ ಮಾಡಿದ್ದ ಮಹಿಷಾ ಮರ್ದಿನಿ ವಿಶೇಷ ಅಲಂಕಾರ ಗಮನ ಸೆಳೆಯಿತು. ಕರಗ ಸಂದರ್ಭ ಪರಸ್ಪರ ಅಂತರ ಕಾಯ್ದುಕೊಂಡಿದ್ದು, ಭಕ್ತರು ಸಹ ಮಾಸ್ಕ್‌ ಧರಿಸಿ ಬಂದಿದ್ದರು. ಚಾಮುಂಡೇಶ್ವರಿ ದೇಗುಲದ ಆವರಣದಲ್ಲಿ ಸೋಂಕು ನಿವಾರಕ ಟನಲ್‌ ಸಹ ಹಾಕಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.