ADVERTISEMENT

ಅಕ್ರಮವಾಗಿ ಕೆರೆ ಮಣ್ಣು ಸಾಗಾಟ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 5:50 IST
Last Updated 26 ಜೂನ್ 2025, 5:50 IST
ಹಾರೋಹಳ್ಳಿ ತಾಲ್ಲೂಕಿನ ಹನುಮಂತಪುರ ದೊಡ್ಡಕೆರೆಯಲ್ಲಿ ಅಕ್ರಮವಾಗಿ ತೆಗೆದು ಸಾಗಿಸುತ್ತಿರುವುದು
ಹಾರೋಹಳ್ಳಿ ತಾಲ್ಲೂಕಿನ ಹನುಮಂತಪುರ ದೊಡ್ಡಕೆರೆಯಲ್ಲಿ ಅಕ್ರಮವಾಗಿ ತೆಗೆದು ಸಾಗಿಸುತ್ತಿರುವುದು   

ಹಾರೋಹಳ್ಳಿ: ತಾಲ್ಲೂಕಿನ ಹನುಮಂತಪುರ ಗ್ರಾಮದ ದೊಡ್ಡಕೆರೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡಲಾಗುತ್ತಿದೆ. ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆಯದೆ ಟ್ರ್ಯಾಕ್ಟರ್ ಮತ್ತು ಜೆಸಿಬಿ ಬಳಸಿ ಲೇಔಟ್ ಜಾಗಗಳು ಮತ್ತು ತೋಟಗಳಿಗೆ ಮಣ್ಣು ಸಾಗಿಸಲಾಗುತ್ತಿದೆ.

ಹಗಲಿನಲ್ಲೇ ಅಕ್ರಮವಾಗಿ ಮಣ್ಣು ಸಾಗಿಸುತ್ತಿರುವ ಕುರಿತು ತಹಶೀಲ್ದಾರ್‌ಗೆ ದೂರು ನೀಡಿದ್ದರೂ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸರು ಸಹ ಮಣ್ಣು ತುಂಬಿಕೊಂಡು ಹೋಗುವ ವಾಹನಗಳನ್ನು ಪರಿಶೀಲಿಸದೆ ಹಾಗೆಯೇ ಬಿಟ್ಟು ಕಳಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

‘ಮಣ್ಣು ಸಾಗಿಸುವವರಿಗೆ ಅಧಿಕಾರಿಗಳ ಅಭಯಹಸ್ತವಿದೆ. ಹಾಗಾಗಿಯೇ, ದೂರು ಕೊಟ್ಟರೂ ಕ್ರಮ ಕೈಗೊಂಡಿಲ್ಲ. ಕಂದಾಯ ಇಲಾಖೆ ನಿಯಮಗಳ ಪ್ರಕಾರ, ಕೆರೆಗಳಲ್ಲಿ 4 ಅಡಿಗಿಂತಲೂ ಹೆಚ್ಚು ಆಳವಾಗಿ ಹಾಗೂ ನೇರವಾಗಿ ಮಣ್ಣು ತೆಗೆಯುವಂತಿಲ್ಲ. ತೆಗೆದರೂ ಅನುಮತಿ ಪಡೆಯಬೇಕು. ಇಷ್ಟೆಲ್ಲಾ ನಿಯಮಗಳಿದ್ದರೂ ಕೆಲ ಪ್ರಭಾವಿಗಳಿಂದ ಮಣ್ಣು ದಂಧೆ ನಡೆಯುತ್ತಲೇ ಇದೆ’ ಎಂದು ಮರಳವಾಡಿ ನಿವಾಸಿ ಮಂಜುನಾಥ್ ಎಂ.ಬಿ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.