ADVERTISEMENT

ಜೀವವಿಮಾ ನಿಗಮ ಪ್ರತಿಯೊಬ್ಬರ ನಂಬಿಕೆಗೆ ಪಾತ್ರ: ಶ್ರೀನಿವಾಸರೆಡ್ಡಿ

​ಪ್ರಜಾವಾಣಿ ವಾರ್ತೆ
Published 29 ಮೇ 2023, 13:52 IST
Last Updated 29 ಮೇ 2023, 13:52 IST
ಚನ್ನಪಟ್ಟಣದ ಎಲ್.ಐ.ಸಿ ಕಚೇರಿಯಲ್ಲಿ ಆಯೋಜಿಸಿದ್ದ ಜೀವವಿಮಾ ಪ್ರತಿನಿಧಿಗಳ ಸಭೆಯನ್ನು ನಿಗಮದ ಮಂಡ್ಯ ಶಾಖೆ ಹಿರಿಯ ಅಭಿವೃದ್ಧಿ ಅಧಿಕಾರಿ ಡಾ.ಶ್ರೀನಿವಾಸ ರೆಡ್ಡಿ ಉದ್ಘಾಟಿಸಿದರು. ಶಾಖೆ ಮುಖ್ಯ ವ್ಯವಸ್ಥಾಪಕ ರಮೇಶ್ ಇತರರು ಭಾಗವಹಿಸಿದ್ದರು
ಚನ್ನಪಟ್ಟಣದ ಎಲ್.ಐ.ಸಿ ಕಚೇರಿಯಲ್ಲಿ ಆಯೋಜಿಸಿದ್ದ ಜೀವವಿಮಾ ಪ್ರತಿನಿಧಿಗಳ ಸಭೆಯನ್ನು ನಿಗಮದ ಮಂಡ್ಯ ಶಾಖೆ ಹಿರಿಯ ಅಭಿವೃದ್ಧಿ ಅಧಿಕಾರಿ ಡಾ.ಶ್ರೀನಿವಾಸ ರೆಡ್ಡಿ ಉದ್ಘಾಟಿಸಿದರು. ಶಾಖೆ ಮುಖ್ಯ ವ್ಯವಸ್ಥಾಪಕ ರಮೇಶ್ ಇತರರು ಭಾಗವಹಿಸಿದ್ದರು   

ಚನ್ನಪಟ್ಟಣ: ಭಾರತೀಯ ಜೀವವಿಮಾ ನಿಗಮ ಪ್ರತಿಯೊಬ್ಬರ ನಂಬಿಕೆಗೆ ಪಾತ್ರವಾಗಿ ಹೆಮ್ಮರವಾಗಿ ಬೆಳೆದಿದೆ ಎಂದು ಜೀವ ವಿಮಾ ನಿಗಮದ ಮಂಡ್ಯ ಶಾಖೆ ಹಿರಿಯ ಅಭಿವೃದ್ಧಿ ಅಧಿಕಾರಿ ಡಾ.ಶ್ರೀನಿವಾಸರೆಡ್ಡಿ ಅಭಿಪ್ರಾಯಪಟ್ಟರು.

ನಗರದ ಭಾರತೀಯ ಜೀವಿವಿಮಾ ನಿಗಮದ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಪ್ರತಿನಿಧಿಗಳ ಸಭೆ ಉದ್ಘಾಟಿಸಿ ಮಾತನಾಡಿ, ನಿಗಮದ ಪಾಲಿಸಿ ಜನರಿಗೆ ಪ್ರಾಮಾಣಿಕವಾಗಿ ತಲುಪಿಸುವ ಮುಖಾಂತರ ನಿಗಮವನ್ನು ಉನ್ನತಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದರು.

 ಮುಂದಿನ ದಿನಗಳಲ್ಲಿಯೂ ಪ್ರತಿನಿಧಿಗಳು ಹೆಚ್ಚಿನ ಶ್ರಮ ವಹಿಸಿ ನಿಗಮದ ಯೋಜನೆಗಳನ್ನು ಪಾಲಿಸಿದಾರರಿಗೆ ತಿಳಿಸಿಕೊಡಬೇಕು ಎಂದು ಕಿವಿಮಾತು ಹೇಳಿದರು.

ADVERTISEMENT

ಶಾಖೆ ಮುಖ್ಯ ವ್ಯವಸ್ಥಾಪಕ ರಮೇಶ್ ಮಾತನಾಡಿ, ನಿಗಮದಲ್ಲಿ ಸಾಕಷ್ಟು ಪಾಲಿಸಿಗಳಿವೆ. ಪ್ರತಿಯೊಂದು ಪಾಲಿಸಿಗಳಲ್ಲಿ ಗ್ರಾಹಕರನ್ನು ತೊಡಗಿಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ 2022-23 ನೇ ಸಾಲಿನಲ್ಲಿ ಹೆಚ್ಚು ಪಾಲಿಸಿಗಳನ್ನು ಮಾಡಿಸಿದ ಪ್ರತಿನಿಧಿಗಳಿಗೆ ನಿಗಮದ ಅಭಿವೃದ್ಧಿ ಅಧಿಕಾರಿ ಎಂ.ಕೆ. ಸೋಮಶೇಖರ್ ಬಹುಮಾನ ವಿತರಿಸಿದರು.

ಮಂಡ್ಯ ಶಾಖೆ ಜಡ್.ಎಂ.ಪ್ರತಿನಿಧಿ ಸ್ವರ್ಣಕುಮಾರ್, ಹಿರಿಯ ಪ್ರತಿನಿಧಿಗಳಾದ ಜಗದೀಶ್, ಮುತ್ತುರಾಜು, ಸಂತೋಷ್, ರೂಪ, ಕಲಾವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.