ADVERTISEMENT

ಮಾಗಡಿಯಲ್ಲಿ ಬಿರುಗಾಳಿ ಸಹಿತ ಮಳೆ

ಉರುಳಿ ಬಿದ್ದ ವಿದ್ಯುತ್‌ ಕಂಬ, ತುಂಡಾದ ತಂತಿ: ವಿದ್ಯುತ್‌ ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 14:58 IST
Last Updated 13 ಏಪ್ರಿಲ್ 2025, 14:58 IST
ಮಾಗಡಿ ಪಟ್ಟಣದ ಹೊಸಪೇಟೆಯ ಮಾದೇಶ್ ರವರ ಮನೆಯ ಮುಂಭಾಗ ವಿದ್ಯುತ್ ಕಂಬಕ್ಕೆ ನೀಲಗಿರಿ ಮರ ಬಿದ್ದು ವಿದ್ಯುತ್ ತಂತಿ ತುಂಡಾಗಿರುವುದು.
ಮಾಗಡಿ ಪಟ್ಟಣದ ಹೊಸಪೇಟೆಯ ಮಾದೇಶ್ ರವರ ಮನೆಯ ಮುಂಭಾಗ ವಿದ್ಯುತ್ ಕಂಬಕ್ಕೆ ನೀಲಗಿರಿ ಮರ ಬಿದ್ದು ವಿದ್ಯುತ್ ತಂತಿ ತುಂಡಾಗಿರುವುದು.   

ಮಾಗಡಿ: ತಾಲ್ಲೂಕು ಹಾಗೂ ಪಟ್ಟಣದಲ್ಲಿ ಶನಿವಾರ ಸಂಜೆ ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದೆ. ಸಂಜೆ ನಾಲ್ಕು ಗಂಟೆಗೆ ಶುರುವಾದ ಭಾರಿ ಗಾಳಿ, ಮಳೆಗೆ ಹಲವು ವಿದ್ಯುತ್‌ ಕಂಬಗಳು ನೆಲಕ್ಕೆ ಉರುಳಿವೆ. ವಿದ್ಯುತ್‌ ತಂತಿಗಳು ತುಂಡಾಗಿ ಬಿದ್ದಿವೆ.  

ಪಟ್ಟಣದ ಹಲವು ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಹೊಸಪೇಟೆಯ ಎಚ್.ಆರ್‌. ಮಾದೇಶ್ ಅವರ ಮನೆಯ ಮುಂದೆ ನೀಲಗಿರಿ ಮರ ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ ವಿದ್ಯುತ್ ತಂತಿ ಹರಿದು ಬಿದ್ದಿದೆ.

ಬಿರುಗಾಳಿ ಸಹಿತ ಮಳೆಗೆ ಮಾಡಬಾಳ್ ಮುಖ್ಯರಸ್ತೆಯಲ್ಲಿ ಮೂರು ವಿದ್ಯುತ್ ಕಂಬ, ಶಂಬುದೇವನಹಳ್ಳಿ, ಉಡುವೆಗೆರೆಯ ಸಮೀಪದ ಬಾಳೆಕಟ್ಟೆ ಹಾಗೂ ಹೊಸಹಳ್ಳಿಯಲ್ಲಿ ಕಂಬಗಳು ನೆಲಕ್ಕೆ ಉರುಳಿವೆ. ಬೆಸ್ಕಾಂ ಸಿಬ್ಬಂದಿ ಕಂಬ ಹಾಗೂ ಹರಿದು ಬಿದ್ದ ವಿದ್ಯುತ್‌ ತಂತಿ ದುರಸ್ತಿ ಕೆಲಸದಲ್ಲಿ ತೊಡಗಿದ್ದಾರೆ. 

ADVERTISEMENT
ಮಾಗಡಿ ಪಟ್ಟಣದಲ್ಲಿ ಶನಿವಾರ ಸಂಜೆ ಬಿರುಗಾಳಿ ಸಹಿತ ಭರ್ಜರಿ ಮಳೆ ಬೀಳುತ್ತಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.