ADVERTISEMENT

ಉಚಿತ, ಸಾಮೂಹಿಕ ವಿವಾಹ ಆಯೋಜನೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 13:24 IST
Last Updated 14 ಫೆಬ್ರುವರಿ 2020, 13:24 IST

ಮಾಗಡಿ: ‘ಇಲ್ಲಿನ ಸಾವನದುರ್ಗ ಗಿರಿಧಾಮದಲ್ಲಿ ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ದತ್ತಿ ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಸಹಯೋಗದಲ್ಲಿ ಉಚಿತ ಸಾಮೂಹಿಕ ವಿವಾಹವನ್ನು ಮೇ 24ರಂದು ನಡೆಸಲು ಆಯೋಜಿಸಲಾಗಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ ತಿಳಿಸಿದ್ದಾರೆ.

‘ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವ ವಧು, ವರರಿಗೆ ಒಟ್ಟು ₹ 55 ಸಾವಿರ ಉಡುಗೊರೆಯನ್ನು ವಸ್ತ್ರ, ಮಾಂಗಲ್ಯದ ರೂಪದಲ್ಲಿ ನೀಡಲಾಗುವುದು. ಹೆಸರು ನೋಂದ‌ಣಿಗೆ ಏ. 24 ಕಡೆಯ ದಿನ. ಏ. 29ರಂದು ದೇವಾಲಯದ ನೋಟಿಸ್‌ ಬೋರ್ಡ್‌ನಲ್ಲಿ ವಿವಾಹವಾಗಲಿರುವವರ ಹೆಸರು ಪ್ರಕಟಿಸಲಾಗುವುದು. ತಿದ್ದುಪಡಿಗಳು ಇದ್ದಲ್ಲಿ ಮೇ 4ರೊಳಗೆ ಲಿಖಿತ ರೂಪದಲ್ಲಿ ಸಲ್ಲಿಸಬೇಕು. ಅಂತಿಮ ವಧೂ, ವರರ ಪಟ್ಟಿಯನ್ನು ಮೇ 9ರೊಳಗೆ ಪ್ರಕಟಿಸಲಾಗುವುದು’ ಎಂದು ಹೇಳಿದರು.

‘ವಿವಾಹದ ನಂತರ ಅವರ ಬ್ಯಾಂಕ್ ಖಾತೆಗೆ ₹ 55 ಸಾವಿರ ಮೊತ್ತವನ್ನು ಜಮೆ ಮಾಡಲಾಗುವುದು. ಹೆಸರು ನೋಂದಣಿಗೆ ದೂರವಾಣಿ ಸಂಖ್ಯೆ 94480 17596 ಅನ್ನು ಸಂಪರ್ಕಿಸಬಹುದು’ ಎಂದು ತಿಳಿಸಿದ್ದಾರೆ.

ADVERTISEMENT

ಸಮಾಜ ಸೇವಕ ಎಂ.ಸಿ.ರಾಜಣ್ಣ, ವಿವಾಹ ವೇದಿಕೆ ಅಧ್ಯಕ್ಷ ನಾಗರಾಜು, ರಘು, ಜಿ.ಸೋಮಶೇಖರ್‌, ಎನ್‌.ಕಿರಣ್‌ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.