ಚನ್ನಪಟ್ಟಣ: ತಾಲ್ಲೂಕು ಮಟ್ಟದ ಮಿಶ್ರತಳಿ ಹಸುಗಳ ಅಧಿಕ ಹಾಲು ಕರೆಯುವ ಸ್ಪರ್ಧೆಯ ನೆಲಮಾಕನಹಳ್ಳಿಯ ಯುವ ರೈತ ಕಾರ್ತಿಕ್ ಅವರ ಹಸು 27.79 ಲೀಟರ್ ಹಾಲು ನೀಡುವ ಮೂಲಕ ಪ್ರಥಮ ಸ್ಥಾನ ಪಡೆಯಿತು.
ಗಿಜಗನದಾಸನದೊಡ್ಡಿ ಪುಟ್ಟರಾಮೇಗೌಡ ಅವರ ಹಸು ಎರಡನೇ ಸ್ಥಾನ, ನೇರಳೂರು ಎನ್.ಆರ್. ಮನು ಹಸು ಮೂರನೇ ಸ್ಥಾನ, ಇಗ್ಗಲೂರು ಗ್ರಾಮದ ಐ.ಎನ್. ಸ್ವಾಮಿ ಅವರ ಹಸು ನಾಲ್ಕನೇ ಸ್ಥಾನ ಪಡೆಯಿತು.
ತಾಲ್ಲೂಕಿನ ಇಗ್ಗಲೂರು ಗ್ರಾಮದಲ್ಲಿ ರಾಮನಗರ ಜಿಲ್ಲಾ ಪಂಚಾಯಿತಿ, ಚನ್ನಪಟ್ಟಣ ತಾಲ್ಲೂಕು ಪಂಚಾಯಿತಿ, ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಬಮೂಲ್ ಚನ್ನಪಟ್ಟಣ ಶಿಬಿರ, ವಿವಿಧ ಗ್ರಾಮಗಳ ಎಂಪಿಸಿಎಸ್ ಸಹಯೋಗದಲ್ಲಿ ಶುಕ್ರವಾರ ಈ ಸ್ಪರ್ಧೆ ಆಯೋಜಿಸಲಾಗಿತು.
ತಾಲ್ಲೂಕಿನ ಇಗ್ಗಲೂರು, ಗುಡಿ ಸರಗೂರು, ಚಿಕ್ಕಬೋರೇಗೌಡನದೊಡ್ಡಿ, ನೇರಳೂರು, ನುಣ್ಣೂರು, ಸೋಗಾಲ, ಸೋಗಾಲಪಾಳ್ಯ, ನೆಲಮಾಕನಹಳ್ಳಿ, ಸಾಮಂದಿಪುರ, ಹಾರೋಕೊಪ್ಪ, ಮಾರೇಗೌಡನದೊಡ್ಡಿ, ವೀರೇಗೌಡನದೊಡ್ಡಿ ಹಾಗೂ ಗೀಜಗದಾಸನದೊಡ್ಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ 14 ಸ್ಪರ್ಧಿಗಳು ಭಾಗವಹಿಸಿದ್ದರು.
ವಿಜೇತರಿಗೆ ಬಹುಮಾನ ವಿತರಿಸಿದ ಇಗ್ಗಲೂರು ಎಂಪಿಸಿಎಸ್ ಅಧ್ಯಕ್ಷ ಡಿಎಂಕೆ ಕುಮಾರ್, ಹೈನುಗಾರಿಕೆಯಿಂದ ಗ್ರಾಮೀಣ ಪ್ರದೇಶದ ಜನರ ಬದುಕು ಹಸನಾಗಿದೆ. ಗ್ರಾಮೀಣ ಪ್ರದೇಶದ ರೈತರು ಹೆಚ್ಚಾಗಿ ಕೃಷಿಯ ಜೊತೆಗೆ ಹೈನುಗಾರಿಕೆ ನಂಬಿಕೊಂಡಿದ್ದು, ಇದರಿಂದ ಲಾಭ ಗಳಿಸಿ ಉತ್ತಮ ಬದುಕು ರೂಪಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಇಗ್ಗಲೂರು ಸೊಸೈಟಿ ಅಧ್ಯಕ್ಷ ಇ.ತಿ. ಶ್ರೀನಿವಾಸ್, ಪಶುವೈದ್ಯ ಇಲಾಖೆಯ ಉಪ ನಿರ್ದೇಶಕ ಅಸಾದುಲ್ಲಾ ಷರೀಫ್, ಬಮೂಲ್ ಚನ್ನಪಟ್ಟಣ ಶಿಬಿರ ಕಚೇರಿ ಸಹಾಯಕ ವ್ಯವಸ್ಥಾಪಕ ಡಾ.ಸಿ.ಆರ್. ಕಿರಣ್, ಇಗ್ಗಲೂರು ಗ್ರಾ.ಪಂ. ಅಧ್ಯಕ್ಷ ಎನ್.ಎಸ್. ಶಿವಪ್ರಕಾಶ್, ಪಶು ಪಾಲನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕೃಷ್ಣಮೂರ್ತಿ, ಇಲಾಖೆಯ ಪಶು ವೈದ್ಯರಾದ ರಾಮಲಿಂಗಯ್ಯ, ಎ.ಎನ್. ಮಧು, ಹುಚ್ಚೇಗೌಡ, ಲೋಕೇಶ್, ಮೈತ್ರಿ, ರಕ್ಷಿತಾ, ಲೋಕೇಶ್, ಗಿರೀಶ್, ನಜೀರ್, ವಿಶ್ವನಾಥ್, ಜಯರಾಂ, ಜುನೈದ್, ಅಂಕೇಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.