ADVERTISEMENT

ರಾಮನಗರ | ಕಲ್ಯಾಣಿಯಲ್ಲಿ ತಾಯಿ–ಮಗಳ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 5:08 IST
Last Updated 26 ಜೂನ್ 2022, 5:08 IST
ಮಂಗಳಮ್ಮ.
ಮಂಗಳಮ್ಮ.   

ಮಾಗಡಿ: ಪಟ್ಟಣದ ಪುರಸಭೆ ಪಂಪ್‌ ಹೌಸ್‌ ಎದುರಿನಲ್ಲಿರುವ ಕಲ್ಯಾಣಿಯಲ್ಲಿ ಶನಿವಾರ ತಾಯಿ–ಮಗಳ ಶವ ಪತ್ತೆ ಆಗಿದೆ.

ಪಟ್ಟಣದ ಗದ್ದೆಬಯಲು ಪ್ರದೇಶದ ಮಂಗಳಮ್ಮ(37) ಹಾಗೂ ಅವರ ಪುತ್ರಿ ಸನ್ನಿಧಿ (7) ಮೃತರು. ಕಲ್ಯಾಣಿ ಪಕ್ಕದಲ್ಲಿ ಸ್ಕೂಟರ್ ಮಂಗಳಮ್ಮ ಅವರ ದ್ವಿಚಕ್ರ ವಾಹನ ಪತ್ತೆಯಾಗಿದೆ.

‘ಬೆಳಿಗ್ಗೆ 6 ಗಂಟೆ ಸುಮಾರಿಗೆ ಪತ್ನಿಯು ಪುತ್ರಿ ಜೊತೆಗೂಡಿ ತರಕಾರಿ–ಹಾಲು ತರಲು ಮಾರುಕಟ್ಟೆಗೆ ಹೋಗಿದ್ದರು. ನಂತರ ಶವವಾಗಿ ಪತ್ತೆಯಾಗಿದ್ದಾರೆ’ ಎಂದು ಆಕೆಯ ಪತಿ ರಂಗೇಗೌಡ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ADVERTISEMENT

ಅಗ್ನಿಶಾಮಕ ದಳದ ಸಿಬ್ಬಂದಿ ನೆರವಿನಿಂದಪೊಲೀಸರು ಕಲ್ಯಾಣಿಯಲ್ಲಿದ್ದ ಶವಗಳನ್ನು ಹೊರತೆಗೆದರು. ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಸಂಜೆ ಅಂತ್ಯಕ್ರಿಯೆ ನೆರವೇರಿತು. ಮಾಗಡಿ ಠಾಣೆಯಲ್ಲಿಅಸಹಜ ಸಾವು ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.