ADVERTISEMENT

ರಾಮನಗರ | 17 ಕೊರೊನಾ ಸೋಂಕು ಪ್ರಕರಣ ವರದಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 16:13 IST
Last Updated 17 ಜುಲೈ 2020, 16:13 IST

ರಾಮನಗರ: ಜಿಲ್ಲೆಯಲ್ಲಿ ಶುಕ್ರವಾರ 17 ಕೋವಿಡ್‌-19 ಪ್ರಕರಣಗಳು ವರದಿಯಾಗಿವೆ.

ಕಳೆದೊಂದು ವಾರದಿಂದ ಯಾವುದೇ ಪ್ರಕರಣಗಳು ವರದಿಯಾಗದೇ ಸೋಂಕು ಮುಕ್ತವಾಗುವತ್ತ ಹೆಜ್ಜೆ ಇಟ್ಟಿದ್ದ ಕನಕಪುರದಲ್ಲಿ ಈ ದಿನ ಎರಡು ಪ್ರಕರಣಗಳು ಪತ್ತೆಯಾಗಿವೆ. ರಾಮನಗರ ತಾಲ್ಲೂಕಿನ 12 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಚನ್ನಪಟ್ಟಣ 2, ಕನಕಪುರ 2, ಮಾಗಡಿ 1 ಪ್ರಕರಣಗಳು ವರದಿ ಆಗಿವೆ.

ಇದರಿಂದಾಗಿ ಸೋಂಕಿತರ ಒಟ್ಟು ಸಂಖ್ಯೆ 414ಕ್ಕೆ ಏರಿಕೆ ಆಗಿದೆ. ಇದರಲ್ಲಿ ಕನಕಪುರ 87, ಮಾಗಡಿ 138, ಚನ್ನಪಟ್ಟಣ 80 ಮತ್ತು ರಾಮನಗರದ 109 ಪ್ರಕರಣಗಳು ಸೇರಿವೆ. ಇವರಲ್ಲಿ 272 ಜನರು ಗುಣಮುಖರಾಗಿದ್ದರೆ, ಇನ್ನೂ 133 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.