ADVERTISEMENT

ಮದಲಾರಯ್ಯನ ಪಾಳ್ಯ ಡೇರಿ ಅಧ್ಯಕ್ಷರಾಗಿ ನಯಾಜ್‌ ಅಹಮದ್‌ ಆಯ್ಕೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 13:05 IST
Last Updated 19 ಅಕ್ಟೋಬರ್ 2019, 13:05 IST
ಮಾಗಡಿ ತಾಲ್ಲೂಕಿನ ಮದಲಾರಯ್ಯನಪಾಳ್ಯ ಡೇರಿಗೆ ಆಯ್ಕೆಯಾದ ಅಧ್ಯಕ್ಷ ನಯಾಜ್‌ ಅಹಮದ್‌, ಉಪಾಧ್ಯಕ್ಷೆ ಬಿ.ಎಂ.ಶಾಂತಮ್ಮ ಅವರನ್ನು ಅಮ್ಜದ್‌ ಪಾಷಾ ಸನ್ಮಾನಿಸಿದರು
ಮಾಗಡಿ ತಾಲ್ಲೂಕಿನ ಮದಲಾರಯ್ಯನಪಾಳ್ಯ ಡೇರಿಗೆ ಆಯ್ಕೆಯಾದ ಅಧ್ಯಕ್ಷ ನಯಾಜ್‌ ಅಹಮದ್‌, ಉಪಾಧ್ಯಕ್ಷೆ ಬಿ.ಎಂ.ಶಾಂತಮ್ಮ ಅವರನ್ನು ಅಮ್ಜದ್‌ ಪಾಷಾ ಸನ್ಮಾನಿಸಿದರು   

ಮಾಗಡಿ: ಇಲ್ಲಿನ ಮದಲಾರಯ್ಯನಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಶನಿವಾರ ಚುನಾವಣೆ ನಡೆಯಿತು.

ನಯಾಜ್‌ ಅಹಮದ್‌ ಅಧ್ಯಕ್ಷರಾಗಿ, ಬಿ.ಕೆ.ಶಾಂತಮ್ಮ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್‌.ಪ್ರಸನ್ನ ಕುಮಾರಿ ತಿಳಿಸಿದರು.

ನೂತನ ಅಧ್ಯಕ್ಷ ನಯಾಜ್‌ ಅಹಮದ್‌ ಮಾತನಾಡಿ, ಡೇರಿಯಲ್ಲಿ 180 ಜನ ಷೇರುದಾರರಿದ್ದಾರೆ. ನಿತ್ಯ 300 ಲೀಟರ್‌ ಹಾಲು ಸಂಗ್ರಹವಾಗುತ್ತಿದೆ. ಸಂಘದ ನಿರ್ದೇಶಕರೆಲ್ಲರ ಸಹಕಾರದೊಂದಿಗೆ ಸಂಘದ ಬೆಳವಣಿಗೆಗೆ ದುಡಿಯುವುದಾಗಿ ತಿಳಿಸಿದರು.

ADVERTISEMENT

ನಿರ್ದೇಶಕರಾದ ಅಬ್ದುಲ್‌ ಖಲೀಲ್‌, ಗಂಗನರಸಯ್ಯ, ರಾಜಶೇಖರ್‌, ಮಮತಾ, ಅನ್ಸರ್‌ಪಾಷಾ, ಜರೀನ್‌ ತಾಜ್‌, ಮುಖಂಡರಾದ ರಾಜಣ್ಣ, ಮಹಮದ್‌ ಮುನೀರ್‌ ಪಾಷಾ, ಹೊನ್ನಯ್ಯ, ಕೃಷ್ಣಪ್ಪ, ಬಸವರಾಜು, ಕುಮಾರ್‌, ಅಮ್ಜದ್‌ ಪಾಷಾ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದರು. ಸಿಹಿ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.