ADVERTISEMENT

ಮತ್ತೆ ಶಾಸಕನಾಗುವುದರಲ್ಲಿ ಅನುಮಾನವಿಲ್ಲ: ಎ.ಮಂಜುನಾಥ್

​ಪ್ರಜಾವಾಣಿ ವಾರ್ತೆ
Published 19 ಜೂನ್ 2025, 14:30 IST
Last Updated 19 ಜೂನ್ 2025, 14:30 IST
<div class="paragraphs"><p>ಎ.ಮಂಜುನಾಥ್</p></div>

ಎ.ಮಂಜುನಾಥ್

   

ಮಾಗಡಿ: 2028ರ ಚುನಾವಣೆಯಲ್ಲಿ ಮಾಗಡಿ ವಿಧಾನಸಭಾ ಕ್ಷೇತ್ರದಿಂದ ನಾನು ಜೆಡಿಎಸ್ ಶಾಸಕನಾಗಿ ಆಯ್ಕೆಯಾಗುವುದರಲ್ಲಿ ಅನುಮಾನವಿಲ್ಲ ಎಂದು ಮಾಜಿ ಶಾಸಕ ಎ.ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ನಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿದ ಅವರು, ಅಧಿಕಾರ ಪಡೆಯಲು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ. ಈ ಬಗ್ಗೆ ನನ್ನ ಜೊತೆ ಚರ್ಚಿಸಿಲ್ಲ. ಪಕ್ಷ ತೊರೆದಿರುವ ಎಲ್ಲಾ ನಾಯಕರ ಭವಿಷ್ಯ ಉಜ್ವಲವಾಗಲಿ. ಈ ಬಗ್ಗೆ ಹೆಚ್ಚು ಚರ್ಚೆ ಅನಗತ್ಯ ಎಂದರು.

ADVERTISEMENT

ನಮ್ಮ ಕಾರ್ಯಕರ್ತರಿಗೆ ಪಕ್ಷದ ಸದಸ್ಯತ್ವ ಕೊಡುವ ನಿಟ್ಟಿನಲ್ಲಿ ಅಭಿಯಾನ ನಡೆಸುತ್ತಿದ್ದು, ಮಾಗಡಿಯಲ್ಲಿ ಜೆಡಿಎಸ್ ಪಕ್ಷದ ದೊಡ್ಡ ಸಮಾವೇಶ ಮಾಡಲಾಗುವುದು. 2028ರ ಚುನಾವಣೆಯಲ್ಲಿ ನಾನು ಮತ್ತೊಮ್ಮೆ ಶಾಸಕನಾಗಿ ಜನ ಸೇವೆ ಮಾಡುತ್ತೇನೆ ಎಂದರು.

ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್ ವಿಚಾರವಾಗಿ ಸಂಸದ ಮಂಜುನಾಥ್ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದು, ಅವರೇ ಈ ಸಮಸ್ಯೆ ಬಗೆಹರಿಸಲಿ. ನಮ್ಮ ಪಾಲಿನ ನೀರನ್ನು ನಮಗೆ ಹರಿಸಲು ವಿರೋಧ ಮಾಡುವುದು ಸರಿಯಲ್ಲ ಎಂದು ಟೀಕಿಸಿದರು.

ತಗ್ಗೀಕುಪ್ಪೆ ರಾಮಣ್ಣ, ಮಾರುತಿಗೌಡ, ಹೊಸಹಳ್ಳಿ ರಂಗಣಿ, ಕುಮಾರ್, ವಿಜಯಕುಮಾರ್, ಕೆ.ವಿ.ಬಾಲು, ಅರವಿಂದ ರಾಜೇಂದ್ರ, ರಮೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.