ADVERTISEMENT

26ರಂದು ಹೊಸಪಾಳ್ಯದಲ್ಲಿ ಊರಹಬ್ಬ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2019, 13:53 IST
Last Updated 25 ಮಾರ್ಚ್ 2019, 13:53 IST

ಮಾಗಡಿ: ತಾಲ್ಲೂಕಿನ ಹೊಸಪಾಳ್ಯ, ಐಯ್ಯಂಡಹಳ್ಳಿ, ಕಲ್ಲೆಂಟೆಪಾಳ್ಯ, ತಾವರೆಕೆರೆ ಇತರೆಡೆಗಳಲ್ಲಿ ಮಾರ್ಚ್‌ 26ರಂದು ಊರಹಬ್ಬಗಳು ಬಲುಜೋರಾಗಿ ನಡೆಯಲಿವೆ ಎಂದು ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಹೊಸಪಾಳ್ಯ ಲೋಕೇಶ್‌ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ನೆಂಟರಿಷ್ಟರಿಗೆ ಸಿಹಿ ಹೋಳಿಗೆ, ಹಸಿತಂಬಿಟ್ಟು, ವಿವಿಧ ಬಗೆಯ ಮಾಂಸದ ಊಟ ಮಾಡಿ ಉಣಬಡಿಸಲಾಗುತ್ತಿದೆ. ಮಾಗಡಿ ಸೀಮೆಯಲ್ಲಿ ಊರಹಬ್ಬದ ವೈಭವ ಬಲುಜೋರಾಗಿ ಪೈಪೋಟಿಯ ಮೇಲೆ ನಡೆಯಲಿದೆ. ದೇವರನ್ನು ಪೂಜಿಸಿ, ಆರತಿ ಬೆಳೆಗಿ, ಬೇಟೆ ಬಲಿಕೊಡುವುದು ವಾಡಿಕೆಯಾಗಿದೆ. ಊರಹಬ್ಬದ ಅಂಗವಾಗಿ ರಸ್ತೆಯ ತುಂಬೆಲ್ಲಾ ಮೋಟಾರು ಕಾರು ಭರಾಟೆ ಬಲುಜೋರಾಗಿರುತ್ತದೆ. ಜನಪದ ವೈವಿಧ್ಯದಂತೆ ಕೆಲಸ ಕಡೆಗಳಲ್ಲಿ ಪೌರಾಣಿಕ ನಾಟಕ ಅಭಿನಯ ನಡೆಯಲಿದೆ

ಮತ್ತಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾರ್ಚ್‌ 29ರಂದು ಊರಹಬ್ಬ ನಡೆಯಲಿದೆ. ಕುರಿ,ಕೋಳಿ, ಮೇಕೆ, ಮೀನು ಮಾಂಸದ ಊಟವನ್ನು ಬಂದ ನೆಂಟರಿಗೆ ಉಣಬಡಿಸಲಾಗುತ್ತಿದೆ. ಸಿಹಿ ಹೋಳಿಗೆ ಊಟ ಮಾಡಿ ಸಾಮೂಹಿಕವಾಗಿ ಬಡಿಸುವುದು ವಾಡಿಕೆಯಾಗಿದೆ ಎಂದು ಐಯ್ಯಂಡಹಳ್ಳಿ ರಂಗಸ್ವಾಮಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.