ADVERTISEMENT

ಶಾಂತಿಯುತ ಮತದಾನ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 16:40 IST
Last Updated 12 ನವೆಂಬರ್ 2019, 16:40 IST
ಮಾಗಡಿ 4ನೇ ಮತಗಟ್ಟೆಯಲ್ಲಿ ಶತಾಯುಷಿ ವರದಮ್ಮ ಅವರನ್ನು ಗಾಲಿ ಕುರ್ಚಿಯಲ್ಲಿ ಕರೆತಂದು ಮತದಾನ ಮಾಡಿಸಲಾಯಿತು.
ಮಾಗಡಿ 4ನೇ ಮತಗಟ್ಟೆಯಲ್ಲಿ ಶತಾಯುಷಿ ವರದಮ್ಮ ಅವರನ್ನು ಗಾಲಿ ಕುರ್ಚಿಯಲ್ಲಿ ಕರೆತಂದು ಮತದಾನ ಮಾಡಿಸಲಾಯಿತು.   

ಮಾಗಡಿ: ಇಲ್ಲಿನ ಪುರಸಭಾ 23 ವಾರ್ಡ್‌ಗಳಲ್ಲಿ ಚುನಾವಣೆ ಅಂಗವಾಗಿ ಮತದಾನ ಶಾಂತಿಯುತವಾಗಿ ನಡೆಯಿತು.

ನಾಲ್ಕನೇ ಮತಗಟ್ಟೆಯಲ್ಲಿ ಶತಾಯುಷಿ ವರದಮ್ಮ ಅವರನ್ನು ಗಾಲಿ ಕುರ್ಚಿಯಲ್ಲಿ ಕರೆದು ತಂದು ಮತದಾನ ಮಾಡಿಸಲಾಯಿತು.

ಎಲ್ಲ ಮತಗಟ್ಟೆಗಳಲ್ಲೂ ಮತದಾರರು ಸಾಲಾಗಿ ನಿಂತು ಮತ ಚಲಾಯಿಸಿದರು. ಮಧ್ಯಾಹ್ನದ ನಂತರ ಮತದಾನ ನಿಧಾನಗತಿಯಲ್ಲಿ ನಡೆಯಿತು. 5 ಗಂಟೆಗೆ ಮುಕ್ತಾಯವಾಯಿತು.

ADVERTISEMENT

ಕೆಲವು ಮತಗಟ್ಟೆಗಳ ಮುಂದೆ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಇದ್ದರು. ಶಾಸಕ ಎ.ಮಂಜುನಾಥ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿದ್ದರು. ಕಾಂಗ್ರೆಸ್‌ ಮುಖಂಡರಾದ ಎಚ್‌.ಸಿ.ಬಾಲಕೃಷ್ಣ, ಆರ್‌. ರಂಗನಾಥ್‌ ಶೆಟ್ಟಿ, ರಾಜ್ಯ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ, ಜೆಡಿಎಸ್‌ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ಹಾಗೂ ಜೆಡಿಎಸ್‌ ಮುಖಂಡರು ಇದ್ದರು. ಸೂಕ್ತ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.