ADVERTISEMENT

ರಾಜ್ಯಮಟ್ಟದ ಕಾಯಕಯೋಗಿ ಪ್ರಶಸ್ತಿಗೆ ಬೇವೂರು ರಾಮಯ್ಯ ಆಯ್ಕೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 15:55 IST
Last Updated 27 ಏಪ್ರಿಲ್ 2025, 15:55 IST
<div class="paragraphs"><p>ಬೇವೂರು ರಾಮಯ್ಯ</p></div>

ಬೇವೂರು ರಾಮಯ್ಯ

   

ಚನ್ನಪಟ್ಟಣ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ನೀಡುವ 2025ರ ಕಾಯಕಯೋಗಿ ಪ್ರಶಸ್ತಿಗೆ ತಾಲ್ಲೂಕಿನ ಬೇವೂರು ಗ್ರಾಮದ ಜಾನಪದ ಗಾಯಕ ರಾಮಯ್ಯ ಆಯ್ಕೆಯಾಗಿದ್ದಾರೆ.

ಗಾಯನ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ರಾಮಯ್ಯ ಅವರು ಸಲ್ಲಿಸಿರುವ ಮೂವತ್ತು ವರ್ಷಗಳ ಸೇವೆ ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ಪರಿಷತ್ತಿನ ರಾಜ್ಯಾಧ್ಯಕ್ಷ ಹುಲಿಕಲ್ ನಟರಾಜ್, ರಾಮನಗರ ಜಿಲ್ಲಾಧ್ಯಕ್ಷ ಎಸ್.ರೇಣುಕಾ ಪ್ರಸಾದ್ ತಿಳಿಸಿದ್ದಾರೆ.
ಬಾಗಲಕೋಟೆಯಲ್ಲಿ ಮೇ 1ರಂದು ನಡೆಯಲಿರುವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಬೇವೂರು ರಾಮಯ್ಯ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ADVERTISEMENT

ಬೇವೂರು ರಾಮಯ್ಯ ಅವರು ಜಾನಪದ ಗೀತೆ, ಭಾವಗೀತೆ, ಭಕ್ತಿಗೀತೆ, ನಾಡಗೀತೆ, ರೈತಗೀತೆ, ರಂಗಗೀತೆ, ಲಾವಣಿ, ತತ್ವಪದ, ಗೀಗಿಪದ, ಭಜನೆಪದ ಹೀಗೆ ಹಲವು ಪ್ರಕಾರಗಳ ಗೀತೆಗಳನ್ನು ಹಾಡಿ ಪ್ರಖ್ಯಾತಿಯಾಗಿದ್ದಾರೆ. ಆಕಾಶವಾಣಿ ಕೇಂದ್ರ, ದೂರದರ್ಶನ ಕೇಂದ್ರಗಳಲ್ಲಿಯೂ ಗೀತ ಗಾಯನವನ್ನು ಪ್ರಸ್ತುತಪಡಿಸಿದ್ದಾರೆ. ಜೊತೆಗೆ ಬೀದಿ ನಾಟಕ, ರಂಗಭೂಮಿ ಕ್ಷೇತ್ರಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.