ಕುದೂರು: ಬಿಸಿಲಿನ ಬೇಗೆಯಿಂದ ಬಸವಳಿದ ಪಟ್ಟಣದ ಜನತೆ ಬುಧವಾರ ಸಂಜೆ ಸುರಿದ ಮಳೆಯಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಹೋಬಳಿಯಾದ್ಯಂತ ಸಂಜೆ ಐದು ಗಂಟೆ ವೇಳೆಗೆ ಗುಡುಗು ಸಹಿತ ಸಣ್ಣಗೆ ಮಳೆ ಸುರಿಯಲಾರಂಭಿಸಿತು. ಹಲವು ದಿನಗಳಿಂದ ಹೆಚ್ಚಾದ ಬಿಸಿಲಿನ ತಾಪದಿಂದ ಪರಿತಪಿಸುತ್ತಿದ್ದ ಜನರು, ಮಳೆಯಿಂದಾಗಿ ಉಲ್ಲಾಸದ ನಗೆ ಬೀರಿದರು.
ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿತು. ಹಲವು ದಿನಗಳಿಂದ ರಣಬಿಸಿಲಿಗೆ ಕಾದ ಬಾಣಲಿಯಂತಾಗಿದ್ದ ಭೂಮಿಗೆ ಕೆಲ ಹೊತ್ತು ಸುರಿದ ಮಳೆಯು ತಂಪನ್ನೆರೆಯಿತು.
ರ್ಷದಲ್ಲಿ ಮೊದಲ ಬಾರಿಗೆ ಮಳೆಯ ಸಿಂಚನವಾಗಿದ್ದು, ನಾಗರಿಕರು ಹರ್ಷ ಪಟ್ಟರು. ಸಾಮಾಜಿಕ ಜಾಲತಾಣಗಳಲ್ಲಿ ಮಳೆಯ ಚಿತ್ರ ಹಾಗೂ ಮಳೆಯಲ್ಲಿ ನಿಂತ ಚಿತ್ರಗಳನ್ನು ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.