ADVERTISEMENT

ರಾಮನಗರ ಸುತ್ತಮುತ್ತ ಜೋರು ಮಳೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2019, 14:59 IST
Last Updated 16 ಸೆಪ್ಟೆಂಬರ್ 2019, 14:59 IST

ರಾಮನಗರ: ನಗರ ಹಾಗೂ ಸುತ್ತಮುತ್ತ ಸೋಮವಾರ ಸಂಜೆ ಜೋರು ಮಳೆಯಾಯಿತು.

ಸಂಜೆ ಐದರ ಸುಮಾರಿಗೆ ಮಳೆ ಆರಂಭಗೊಂಡಿದ್ದು, ಒಂದು ಗಂಟೆ ಕಾಲ ಹನಿಯಿತು. ರಾತ್ರಿ ಏಳರ ನಂತರ ಮತ್ತೊಮ್ಮೆ ಜೋರು ಮಳೆಯಾಯಿತು. ಗುಡುಗು–ಸಿಡಿಲಿನ ಅಬ್ಬರ ಇರದೇ ಹೋದರೂ ವರ್ಷಧಾರೆಯ ರಭಸ ಹೆಚ್ಚಾಗಿಯೇ ಇತ್ತು.

ಜೂನ್‌–ಜುಲೈನಲ್ಲಿ ಮಳೆಯ ಕೊರತೆ ಅನುಭವಿಸಿದ್ದ ಜಿಲ್ಲೆಗೆ ಸದ್ಯದ ಮಳೆ ಕೊಂಚ ನೆಮ್ಮದಿ ತಂದಿದೆ. ಕೃಷಿ ಚಟುವಟಿಕೆಗಳೂ ಚೇತರಿಕೆ ಕಂಡಿವೆ. ಇನ್ನೆರಡು ಹದ ಮಳೆ ಬಿದ್ದಲ್ಲಿ ರಾಗಿ ಫಸಲು ರೈತರ ಕೈ ಸೇರುವುದು ನಿಶ್ಚಿತವಾಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.