ಪ್ರಜಾವಾಣಿ ವಾರ್ತೆ
ಕನಕಪುರ: ತಾಲ್ಲೂಕಿನ ಚಿಕ್ಕಮುದುವಾಡಿ ಗ್ರಾಮದ ಲಕ್ಷ್ಮಿ ನರಸಿಂಹ ಜಾತ್ರಾ ಮಹೋತ್ಸವ ಏಪ್ರಿಲ್ 18 ರಿಂದ 21 ರವರೆಗೆ ನಾಲ್ಕು ದಿನ ನಡೆಯಲಿದೆ.
ಏ.18ರಂದು ಬೆಳಗ್ಗೆ ಕಲ್ಯಾಣೋತ್ಸವ ಮತ್ತು ಶಯನೋತ್ಸವದೊಂದಿಗೆ ಜಾತ್ರೆಗೆ ಚಾಲನೆ ದೊರೆಯಲಿದೆ. ಸಂಜೆ ಬಸವೇಶ್ವರ ಯಳವಾರ ಕಾರ್ಯಕ್ರಮ ರಾಜಬೀದಿಯಲ್ಲಿ ಮೆರವಣಿಗೆಯೊಂದಿಗೆ ಜರುಗಲಿದೆ.
ಶನಿವಾರ ಬೆಳಗ್ಗೆ ಬಸವೇಶ್ವರ ಅಗ್ನಿಕೊಂಡೋತ್ಸವ, ಮಧ್ಯಾಹ್ನ ಲಕ್ಷ್ಮಿ ನರಸಿಂಹ ರಥೋತ್ಸವ ಜರಗಲಿದೆ. ಭಾನುವಾರ ಬೆಳಗ್ಗೆ ಗರುಡೋತ್ಸವ, ರಾತ್ರಿ ಹೂವಿನ ಪಲ್ಲಕ್ಕಿ ಉತ್ಸವ ನಡೆಯಲಿದೆ.
ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೆ ಬೆಟ್ಟದ ತಪ್ಪಲಿನ ಗ್ರಾಮಗಳಲ್ಲಿ ಗಿರಿ ಪ್ರದಕ್ಷಿಣೆ ಮಹೋತ್ಸವ ಜರುಗಲಿದೆ. ರಾತ್ರಿ ಚಿಕ್ಕಮುದುವಾಡಿ ಗ್ರಾಮ ದೇವತೆ ಮಾರಮ್ಮನಿಗೆ ಪೂಜಾ ಕುಣಿತದೊಂದಿಗೆ ತಂಬಿಟ್ಟಿನ ಆರತಿ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.