ಆನೇಕಲ್ : ತಾಲೂಕಿನ ಅತ್ತಿಬೆಲೆಯಲ್ಲಿ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠ ಶ್ರೀನಿವಾಸ್ ನಗರ ಶಾಖಾ ಮಠ ಮತ್ತು ಬೆಂಗಳೂರಿನ ಅಹಿಲ್ಯಾಬಾಯಿ ಹೋಳ್ಕರ್ ಮಹಿಳಾ ಸಂಘದ ವತಿಯಿಂದ ಅಹಿಲ್ಯಾಬಾಯಿ ಹೋಳ್ಕರ್ ಅವರ 300ನೇ ಜಯಂತೋತ್ಸವ ಅಂವಾಗಿ ಹಮ್ಮಿಕೊಂಡಿದ್ದ ಜ್ಯೋತಿ ಯಾತ್ರೆಯು ತಾಲ್ಲೂಕಿನ ಗಡಿಭಾಗ ಅತ್ತಿಬೆಲೆಗೆ ಬುಧವಾರ ಆಗಮಿಸಿತು.
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧಡೆ ಜ್ಯೋತಿಯತ್ರಿಯು ಸಂಚರಿಸಲಿದ್ದು ಬುಧುವಾರ ತಾಲೂಕಿನ ಅತ್ತಿಬೆಲೆ ಆನೇಕಲ್ ಜಿಗಣಿ ಮತ್ತು ಬೊಮ್ಮಸಂದ್ರದಲ್ಲಿ ಸಂಚರಿಸಿತು. ಮೇ 22 ರಿಂದ ಮೇ 30ರವರೆಗೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿದಡೆ ಜ್ಯೋತಿಯಾತ್ರೆಯೂ ಸಂಚರಿಸಲಿದೆ. ಮೇ 31 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜಿಸಲಾಗಿದೆ.
ತಾಲೂಕಿನ ಅತ್ತಿಬೆಲೆಯಲ್ಲಿ ಅಹಿಲ್ಯಬಾಯಿ ಹೋಳ್ಕರ್ ಅವರ 300ನೇ ಜಯಂತೋತ್ಸವದ ಪ್ರಯುಕ್ತ ಆಯೋಜಿಸಿದ್ದ ಜ್ಯೋತಿಯಾತ್ರೆ ಆಯೋಜಿಸಲಾಗಿತ್ತು. ಅತ್ತಿಬೆಲೆಯ ಬೀರೇಶ್ವರ ಸ್ವಾಮಿ ದೇವಾಲಯದ ಬಳಿ ಜ್ಯೋತಿ ಯಾತ್ರೆಯನ್ನು ಬರಮಾಡಿಕೊಳ್ಳಲಾಯಿತು.
ಕನಕಗುರು ಪೀಠ ತಿಂಥಣಿಬ್ರಿಜ್‌ನ ಸಿದ್ದರಾಮಾನಂದ ಮಹಾಸ್ವಾಮೀಜಿ ಮಾತನಾಡಿ ರಾಜಮಾತೆ ದೇವಿ ಅಹಿಲ್ಯಾಬಾಯಿ ಹೋಳ್ಕರ್ ಅವರ 300ನೇ ಜಯಂತೋತ್ಸವದ ಅಂಗವಾಗಿ ಮೇ 31ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿದಂತೆ ಮುಖಂಡರುಗಳು ಭಾಗವಹಿಸಲಿದ್ದಾರೆ. ಅಹಿಲ್ಯಾಬಾಯಿ ಹೋಳ್ಕರ್ ಅವರ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ಜ್ಯೋತಿ ಯಾತ್ರೆಯನ್ನು ಆಯೋಜಿಸಲಾಗಿದೆ ಎಂದರು.
ಹಿಂದುಳಿದ ಜಾತಿಗಳ ಒಕ್ಕೂಟದ ನಿರ್ದೇಶಕ ನರಸಿಂಹಮೂರ್ತಿ ಮಾತನಾಡಿ ಅಹಿಲ್ಯಬಾಯಿ ಹೋಳ್ಕರ್ ಅವರು ಭಾರತದ ಎಲಿಜಬೆತ್ ಎಂದೇ ಖ್ಯಾತಿ ಪಡೆದಿದ್ದಾರೆ. ದೇವಾಲಯಗಳನ್ನು ಸ್ಥಾಪನೆ ಮಾಡಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅನ್ಯ ಧರ್ಮರ ದಾಳಿಗೊಳಗಾದ 12 ಜ್ಯೋತಿರ್ಲಿಂಗಗಳ ಜೀರ್ಣೋದ್ಧಾರ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಹಿಲ್ಯ ಬಾಯ್ ಹೋಲ್ಕರ್ ಅವರು ಅನ್ನಚತ್ರ, ಧರ್ಮ ಶಾಲೆ, ಕಲ್ಯಾಣಿ ನಿರ್ಮಿಸುವ ಮೂಲಕ ಸಾಮಾಜಿಕ ಪರಿಕಲ್ಪನೆಯನ್ನು ನೀಡಿದ್ದಾರೆ. ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿ ಮಹಿಳಾ ಸೈನ್ಯ ಕಟ್ಟಿದ ಕೀರ್ತಿ ಅಹಿಲ್ಯಬಾಯಿಹೊಳ್ಕರ್ ಅವರಿಗೆ ಸಲ್ಲುತ್ತದೆ ಎಂದರು.
ಕುರುಬರ ಸಂಘದ ತಾಲ್ಲೂಕು ಅಧ್ಯಕ್ಷ ಕೂಡ್ಲು ಗೋಪಿ, ಕಲಾವಿದೆ ಮಂಜುಳ, ಮುಖಂಡರಾದ ರಾಧಾಕೃಷ್ಣ, ತೆಲಗರಹಳ್ಳಿ ಗಿರಿಧರ್, ಸತ್ಯಪ್ಪ ಗುರಿಕಾರ್, ಬಳಗಾರನಹಳ್ಳಿ ಪಟೇಲ್ ನಾರಾಯಣಸ್ವಾಮಿ, ಇಚ್ಛಂಗೂರು ರಮೇಶ್, ಪೂಜಪ್ಪ, ಜಗದೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.