ADVERTISEMENT

ರಾಮಸಂಜೀವಮೂರ್ತಿ ಬ್ರಹ್ಮರಥೋತ್ಸವ

​ಪ್ರಜಾವಾಣಿ ವಾರ್ತೆ
Published 21 ಮೇ 2019, 14:08 IST
Last Updated 21 ಮೇ 2019, 14:08 IST
ದೊಡ್ಡ ಬೆಟ್ಟಳ್ಳಿ ಗ್ರಾಮದಲ್ಲಿ ನಡೆದ ರಾಮಸಂಜೀವಮೂರ್ತಿ ಬ್ರಹ್ಮರಥೋತ್ಸವ
ದೊಡ್ಡ ಬೆಟ್ಟಳ್ಳಿ ಗ್ರಾಮದಲ್ಲಿ ನಡೆದ ರಾಮಸಂಜೀವಮೂರ್ತಿ ಬ್ರಹ್ಮರಥೋತ್ಸವ   

ಕನಕಪುರ: ದೊಡ್ಡಬೆಟ್ಟಳ್ಳಿಯಲ್ಲಿ ರಾಮಸಂಜೀವಮೂರ್ತಿ ಬ್ರಹ್ಮರಥೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು.

ಚಿಕ್ಕಬೆಟ್ಟಹಳ್ಳಿ ಮತ್ತು ದೊಡ್ಡಬೆಟ್ಟಳ್ಳಿ ಎರಡೂ ಗ್ರಾಮಸ್ಥರು ಸೇರಿ ಬ್ರಹ್ಮರಥೋತ್ಸವ ಮತ್ತು ಜಾತ್ರಾ ಮಹೋತ್ಸವ ಆಚರಿಸಿದರು. ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಹಣ್ಣು –ಜವನ ತೇರಿಗೆ ಎಸೆದು ಹರಕೆ ತೀರಿಸಿದರು.

ಮೇ19 ರಂದು ಲೋಕ ಕಲ್ಯಾಣಾರ್ಥವಾಗಿ ಸೀತಾರಾಮ ಕಲ್ಯಾಣೋತ್ಸವ ನಡೆಯಿತು. ಮೇ20ರಂದು ಬ್ರಹ್ಮರಥೋತ್ಸವ ಜರುಗಿತು. 21ರಂದು ಸಂಜೆ ಕಬ್ಬಾಳಮ್ಮನ ಎಳವಾರ ಕಾರ್ಯಕ್ರಮ ನಡೆಯಿತು. ಮೇ22ರ ಬೆಳಿಗ್ಗೆ ಕಬ್ಬಾಳಮ್ಮನ ಅಗ್ನಿಕೊಂಡೋತ್ಸವ ನಡೆಯಲಿದೆ. ನಂತರ ಸಿಡಿ ಕಾರ್ಯ ಜರುಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.