ADVERTISEMENT

9ಕ್ಕೆ ಸಾಮಾಜಿಕ ಹೋರಾಟಗಾರ ಭೈರಯ್ಯ ಸಂಸ್ಮರಣೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 3:12 IST
Last Updated 7 ಆಗಸ್ಟ್ 2025, 3:12 IST
ಭೈರಯ್ಯ
ಭೈರಯ್ಯ   

ಹಾರೋಹಳ್ಳಿ (‌ರಾಮನಗರ): ಇತ್ತೀಚೆಗೆ ನಿಧನರಾದ ಸಾಮಾಜಿಕ ಹೋರಾಟಗಾರ ತಾಲ್ಲೂಕಿನ ವಡೇರಹಳ್ಳಿಯ ಭೈರಯ್ಯ ಅವರ ಸಂಸ್ಮರಣೆ ಕಾರ್ಯಕ್ರಮ ಆ. 9ರಂದು ಬೆಳಿಗ್ಗೆ 11 ಗಂಟೆಗೆ ಸ್ವಗ್ರಾಮದಲ್ಲಿ ಜರುಗಲಿದೆ.

ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್, ಸಾಹಿತಿ ಬರಗೂರು ರಾಮಚಂದ್ರಪ್ಪ, ದಲಿತ ಸಂಘರ್ಷ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಸಮಾಜ ವಿಜ್ಞಾನಿ ಜಿ.ಎನ್. ನಾಗರಾಜ್ ಸೇರಿದಂತೆ ಭೈರಯ್ಯ ಅವರ ಒಡನಾಡಿಗಳು ಭಾಗವಹಿಸಲಿದ್ದಾರೆ.

ವೇದಿಕೆ ಕಾರ್ಯಕ್ರಮದ ಬಳಿಕ ಮಧ್ಯಾಹ್ನ 12ಕ್ಕೆ ಸಹಭೋಜನ ಇರಲಿದೆ. ರಾತ್ರಿ 8 ಗಂಟೆಗೆ ಖ್ಯಾತ ಜಾನಪದ ಗಾಯಕ ಮಳವಳ್ಳಿ ಎಂ. ನಾಗೇಂದ್ರ ಮತ್ತು ತಂಡ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಡಲಿದೆ ಎಂದು ಭೈರಯ್ಯ ಅವರ ಪುತ್ರರಾದ ದಲಿತ ಹಕ್ಕುಗಳ ಸಮಿತಿ ರಾಜ್ಯ ಉಪಾಧ್ಯಕ್ಷ ಬಿ. ರಾಜಶೇಖರಮೂರ್ತಿ ತಿಳಿಸಿದ್ದಾರೆ.

ADVERTISEMENT

ಮಾಹಿತಿಗೆ ಸಂಪರ್ಕ ಸಂಖ್ಯೆ: 9731105526, 9448324727, 9740067321

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.