ADVERTISEMENT

ಪಾಳುಬಿದ್ದ ರೇಷ್ಮೆ ತಳಿ ಅಭಿವೃದ್ಧಿ ಕೇಂದ್ರ

ಹಿಪ್ಪುನೇರಳೆ ಬೆಳೆಗಾರರಿಗೆ ಅನುಕೂಲ ಕಲ್ಪಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 3:21 IST
Last Updated 15 ಏಪ್ರಿಲ್ 2021, 3:21 IST
ಪಾಳುಬಿದ್ದಿರುವ ರೇಷ್ಮೆ ತಳಿ ಅಭಿವೃದ್ಧಿ ಮತ್ತು ತಳಿ ವಿಜ್ಞಾನ ಕೇಂದ್ರ
ಪಾಳುಬಿದ್ದಿರುವ ರೇಷ್ಮೆ ತಳಿ ಅಭಿವೃದ್ಧಿ ಮತ್ತು ತಳಿ ವಿಜ್ಞಾನ ಕೇಂದ್ರ   

ಬಿಡದಿ: ಇಲ್ಲಿನ ರೇಷ್ಮೆ ಅಭಿವೃದ್ಧಿ ಮತ್ತು ತಳಿ ವಿಜ್ಞಾನ ಕೇಂದ್ರದ ಕಟ್ಟಡ ಪಾಳುಬಿದ್ದಿದೆ.

ಹಿಪ್ಪುನೇರಳೆ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ರೇಷ್ಮೆ ಅಭಿವೃದ್ಧಿಗಾಗಿಯೇ ಸರ್ಕಾರ ಬಿಡದಿಯ ಹೃದಯ ಭಾಗದಲ್ಲಿ ವಿಶಾಲವಾದ ರೇಷ್ಮೆ ತಳಿ ಅಭಿವೃದ್ಧಿ ಮತ್ತು ತಳಿ ವಿಜ್ಞಾನ ಕೇಂದ್ರ ನಿರ್ಮಿಸಿದೆ.

ಇಲ್ಲಿ ವಿವಿಧ ಬಗೆಯ ರೇಷ್ಮೆ ತಳಿಗಳ ತೋಟವಿದೆ. ರಾಮನಗರ ‘ರೇಷ್ಮೆ ನಾಡು’ ಎಂದೇ ಪ್ರಸಿದ್ಧವಾಗಿದೆ. ಆದರೆ, ಈ ಕೇಂದ್ರದಲ್ಲಿ ಯಾವುದೇ ಸಂಶೋಧನೆಗಳು ನಡೆಯದೆ ನಿಷ್ಕ್ರಿಯವಾಗಿರುವುದು ಎದ್ದುಕಾಣುತ್ತಿದೆ.

ADVERTISEMENT

ಅಲ್ಪಪ್ರಮಾಣದಲ್ಲಿ ರೇಷ್ಮೆ ಸಸಿ ಬೆಳೆಸಿರುವುದನ್ನು ಮಾತ್ರ ನೋಡಬಹುದು. ಆದರೆ, ಕಚೇರಿ ಆವರಣ ಸಾರ್ವಜನಿಕರ ವಾಹನಗಳ ತಂಗುದಾಣವಾಗಿ ಮಾರ್ಪಟ್ಟಿದೆ. ಇಲ್ಲಿ ರೇಷ್ಮೆ ಕೃಷಿಯ ಅಭಿವೃದ್ಧಿಗೆ ಅವಕಾಶವಿದೆ. ಆದರೆ, ರೇಷ್ಮೆ ತೋಟ ಹೊರತುಪಡಿಸಿ ಇನ್ನಾವುದೇ ಅಭಿವೃದ್ಧಿಯು ಈ ಕೇಂದ್ರದಿಂದ ಕಾಣುತ್ತಿಲ್ಲ ಎಂದು ರೈತ ಸಿದ್ದಲಿಂಗಪ್ಪ ದೂರುತ್ತಾರೆ.

ಕೂಡಲೇ ಸರ್ಕಾರ ಇದರ ಬಗ್ಗೆ ಎತ್ತೆಚ್ಚುಕೊಂಡು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕೇಂದ್ರವನ್ನು ರೂಪಿಸಬೇಕು ಎಂಬುದು ರೈತರ ಒತ್ತಾಯ.

ರೇಷ್ಮೆ ಇಲಾಖೆ ಅಧಿಕಾರಿಗಳು ಕೂಡ ತ್ವರಿತವಾಗಿ ಅನುಕೂಲ ಕಲ್ಪಿಸಲು ಮುಂದಾಗಬೇಕು ಎಂಬುದು ಬೆಳೆಗಾರರ ಆಗ್ರಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.