ADVERTISEMENT

‘ನೈತಿಕತೆ ‍ಪರಂಪರೆಯ ಭಜನೆ, ಹರಿಕಥೆ ಪುನರ್‌ ಆರಂಭಿಸಿ’

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2018, 13:51 IST
Last Updated 18 ನವೆಂಬರ್ 2018, 13:51 IST
ಮಣ್ಣಿಗನ ಹಳ್ಳಿಯಲ್ಲಿ ಇಸ್ಕಾನ್‌ ಸಂಸ್ಥೆ ವತಿಯಿಂದ ನಡೆದ ಸತ್ಸಂಗ ಶಿಬಿರಕ್ಕೆ ರಂಗಭೂಮಿ ಕಲಾವಿದ ನಾಗಾಚಾರ್‌ ಚಾಲನೆ ನೀಡಿದರು.
ಮಣ್ಣಿಗನ ಹಳ್ಳಿಯಲ್ಲಿ ಇಸ್ಕಾನ್‌ ಸಂಸ್ಥೆ ವತಿಯಿಂದ ನಡೆದ ಸತ್ಸಂಗ ಶಿಬಿರಕ್ಕೆ ರಂಗಭೂಮಿ ಕಲಾವಿದ ನಾಗಾಚಾರ್‌ ಚಾಲನೆ ನೀಡಿದರು.   

ಮಾಗಡಿ: ನೈತಿಕತೆ ಪರಂಪರೆ ಬಿತ್ತುವ ಭಜನೆ, ಹರಿಕಥೆಯಂತಹ ಸಾಂಸ್ಕೃತಿಕ ಚಟುವಟಿಕೆ ಪುನರ್‌ ಪ್ರಾರಂಭಿಸುವ ಅಗತ್ಯವಿದೆ ಎಂದು ಗ್ರಾಮೀಣ ಮೂಲ ಸೌಕರ್ಯಗಳ ಇಲಾಖೆ ನಿರ್ದೇಶಕ ಎನ್‌.ಕೃಷ್ಣಪ್ಪ ಕೋಡಿಪಾಳ್ಯ ಅಭಿಪ್ರಾಯಪಟ್ಟರು.

ಮಣ್ಣಿಗನಹಳ್ಳಿ ಚೌಡೇಶ್ವರಿ ದೇಗುಲದ ಆವರಣದಲ್ಲಿ ಶನಿವಾರ ರಾತ್ರಿ ಇಸ್ಕಾನ್‌ ಕೃಷ್ಣ ಪ್ರಜ್ಞೆ ಸಂಘದ ಸಹಯೋಗದಲ್ಲಿ ನಡೆದ ಸತ್ಸಂಗ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಸ್ಕಾನ್‌ ಸಂಸ್ಥೆ ಪ್ರತಿನಿಧಿ ಆದಿ ಕೃಷ್ಣದಾಸ ಮಾತನಾಡಿ, ಕೃಷ್ಣ ಪ್ರಜ್ಞೆ ಎಲ್ಲರಲ್ಲಿಯೂ ಇದೆ. ದುಷ್ಚಟಗಳಿಂದ ದೂರ ಉಳಿಯಲು ಭಜನೆ ಮಾಡುವುದು, ಧಾರ್ಮಿಕ ಗ್ರಂಥಗಳ ಪಠನ ಮಾಡುವುದು ನಿತ್ಯ ನಡೆಯಬೇಕು ಎಂದರು.

ADVERTISEMENT

ನಿವೃತ್ತ ಮುಖ್ಯಶಿಕ್ಷಕ ಎಂ.ಜಿ.ನರಸಿಂಹಯ್ಯ, ಹಿರಿಯ ರಂಗಕಲಾವಿದ ನಾಗಾಚಾರ್, ನಿವೃತ್ತ ಪೊಲೀಸರು ಅಧಿಕಾರಿ ಎಂ.ಜಿ.ಜವರೇಗೌಡ, ನಿವೃತ್ತ ಎಂಜಿನಿಯರ್‌ ಎಂ.ಮಾದೇಗೌಡ, ಶಿಕ್ಷಕಿ ಅನುಸೂಯಮ್ಮ, ಇಸ್ಕಾನ್‌ ಪ್ರತಿನಿಧಿ ಚೈತ್ಯಗುರು ಗೌರದಾಸ, ಸತ್ಸಂಗದಲ್ಲಿ ಮಾತನಾಡಿದರು.

ರಂಗಭೂಮಿ ಕಲಾವಿದ ಎಂ.ಜಿ.ಗೋಪಾಲಕೃಷ್ಣ ಹಾಡುಗಾರಿಕೆ ನಡೆಸಿಕೊಟ್ಟರು. ಮುಖಂಡರಾದ ಹರ್ಷಿತಾ, ಉಮಾ, ಪ್ರಸನ್ನ, ಪದ್ಮ, ತಾಯಮ್ಮ, ರಶ್ಮಿ, ದೊಡ್ಡಮ್ಮ, ಮತ್ತು ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.