ADVERTISEMENT

ರೇಷ್ಮೆ ಬೆಳೆ: ರೈತರಿಗೆ ಜಾಗೃತಿ

ಗುಣಮಟ್ಟದ ರೇಷ್ಮೆ ಉತ್ಪಾದಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 2:49 IST
Last Updated 21 ಅಕ್ಟೋಬರ್ 2025, 2:49 IST
<div class="paragraphs"><p>&nbsp;ರೇಷ್ಮೆ ಸಾಕಣೆ</p></div>

 ರೇಷ್ಮೆ ಸಾಕಣೆ

   

ಕನಕಪುರ: ರೇಷ್ಮೆ ಕೃಷಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಉತ್ಪಾದನೆ ಸುಧಾರಿಸುವ ಮೂಲಕ ಈ ಕ್ಷೇತ್ರದಲ್ಲಿ ಹೊಸ ಉದ್ಯೋಗಾವಕಾಶ ಸೃಷ್ಟಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ವಿಜ್ಞಾನಿ ಡಾ.ಬಾಲಚಂದ್ರ ಅಭಿಪ್ರಾಯಪಟ್ಟರು.

ಸಾತನೂರು ಹೋಬಳಿ ಕೆಮ್ಮಾಳೆ ಗ್ರಾಮದಲ್ಲಿ ಕೇಂದ್ರ ರೇಷ್ಮೆ ಮಂಡಳಿ ಮತ್ತು ಜಿಲ್ಲಾ ರೇಷ್ಮೆ ಇಲಾಖೆ ಜಂಟಿಯಾಗಿ ಏರ್ಪಡಿಸಿಸಿದ್ದ ‘ನಮ್ಮ ರೇಷ್ಮೆ ನಮ್ಮ ಹೆಮ್ಮೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ADVERTISEMENT

ರೇಷ್ಮೆ ಕೃಷಿಯು ರೈತರ ಆರ್ಥಿಕ ಸ್ಥಿತಿ ಉತ್ತಮಗೊಳಿಸುವ ಸಾಮರ್ಥ್ಯ ಹೊಂದಿದೆ. ಆದರೆ, ಈ ಕ್ಷೇತ್ರದಲ್ಲಿ ಪೂರ್ಣ ಸಾಮರ್ಥ್ಯ ತಲುಪಲು ಹಳೆ ಪದ್ಧತಿ ತ್ಯಜಿಸಿ ಹೊಸ ತಾಂತ್ರಿಕತೆ ಮತ್ತು ಆಧುನಿಕ ಕೃಷಿ ಪದ್ಧತಿ ಪ್ರತಿಯೊಬ್ಬ ರೈತರು ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ವಿಜ್ಞಾನಿ ಡಾ.ಮಧುಸೂಧನ್, ಚೀನಾದಿಂದ ಆಮದಾಗುವ ರೇಷ್ಮೆ ಪ್ರಮಾಣ ಕಡಿಮೆಯಾಗುತ್ತಿರುವುದನ್ನು ಸೂಚಿಸಿ ದೇಶದ ಅಗತ್ಯತೆ ಪೂರೈಸಲು ಗುಣಮಟ್ಟದ ರೇಷ್ಮೆ ಉತ್ಪಾದಿಸುವತ್ತ ಗಮನ ಹರಿಸಬೇಕು ಎಂದರು.

ವಿಜ್ಞಾನಿ ಡಾ.ಸುರೇಶ್, ರೇಷ್ಮೆ ಕೃಷಿಯಲ್ಲಿ ನಡೆದಿರುವ ಹೊಸ ಆವಿಷ್ಕಾರ ಬಗ್ಗೆ ಮಾಹಿತಿ ನೀಡಿದರು. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಗಳಿಸಲು ಮತ್ತು ಉತ್ತಮ ಗುಣಮಟ್ಟದ ಕೋಶಗಳಿಂದ ಉತ್ತಮ ಬೆಲೆ ಪಡೆಯಲು ಈ ಹೊಸ ತಂತ್ರಜ್ಞಾನ ಸಹಾಯಕವಾಗಿದೆ ಎಂದರು.

ಚನ್ನಪಟ್ಟಣ ರೇಷ್ಮೆ ತರಬೇತಿ ಸಂಸ್ಥೆ ಮತ್ತು ಕನಕಪುರ ರೇಷ್ಮೆ ತಾಂತ್ರಿಕ ಕೇಂದ್ರದ ಅಧಿಕಾರಿಗಳು ಸೇರಿದಂತೆ ಇಲಾಖೆ ಹಲವು ಅಧಿಕಾರಿಗಳು ‌ಉಪಸ್ಥಿತರಿದ್ದರು.

ಕನಕಪುರ: ರೇಷ್ಮೆ ಕೃಷಿಯಲ್ಲಿ ಹೊಸ ತಾಂತ್ರಿಕತೆಯನ್ನು ಅಳವಡಿಸಿಕೊಂಡು ರೇಷ್ಮೆಯನ್ನು ಅಭಿವೃದ್ಧಿಪಡಿಸಿ ಸುಧಾರಿಸುವುದು, ರೇಷ್ಮೆ ಕೃಷಿಯಲ್ಲಿ ಹೊಸ ಉದ್ಯೋಗ ಸೃಷ್ಟಿಸುವುದು 'ನಮ್ಮ ರೇಷ್ಮೆ ನಮ್ಮ ಹೆಮ್ಮೆ' ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ವಿಜ್ಞಾನಿ ಡಾ.ಬಾಲಚಂದ್ರ ತಿಳಿಸಿದರು.

ತಾಲ್ಲೂಕಿನ ಸಾತನೂರು ಹೋಬಳಿ ಕೆಮ್ಮಾಳೆ ಗ್ರಾಮದಲ್ಲಿ ಕೇಂದ್ರ ರೇಷ್ಮೆ ಮಂಡಳಿ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆ ಜಿಲ್ಲಾ ಪಂಚಾಯಿತಿ, ರೇಷ್ಮೆ ಇಲಾಖೆ ಉಪ ನಿರ್ದೇಶಕರ ಕಚೇರಿ ವತಿಯಿಂದ 'ನಮ್ಮ ರೇಷ್ಮೆ ನಮ್ಮ ಹೆಮ್ಮೆ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರೇಷ್ಮೆ ಕೃಷಿಯು ರೈತರ ಆರ್ಥಿಕ ಶಕ್ತಿಯನ್ನು ವೃದ್ಧಿಸುತ್ತಿದೆ, ಕೃಷಿಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಲು ರೈತರ ಆರ್ಥಿಕ ಶಕ್ತಿ ಹೆಚ್ಚಿಸಲು, ರೇಷ್ಮೆ ಕೃಷಿಯಲ್ಲಿ ಹೊಸ ಕ್ರಾಂತಿ ಆಗಬೇಕಿದೆ. ಅದಕ್ಕಾಗಿ ಹೊಸ ತಂತ್ರಜ್ಞಾನ, ಹೊಸ ತಾಂತ್ರಿಕತೆಯೊಂದಿಗೆ ರೇಷ್ಮೆ ಕೃಷಿಯನ್ನು ಅಭಿವೃದ್ಧಿಪಡಿಸಲಾಗುವುದು. ಅದರ ಬಗ್ಗೆ ರೈತರಿಗೆ ಈ ಕಾರ್ಯಕ್ರಮದ ಮೂಲಕ ತಿಳಿಸಿಕೊಡಲಾಗುತ್ತಿದೆ ಎಂದರು.

ನಮ್ಮ ಭಾಗದಲ್ಲಿ ರೈತರು ಇನ್ನು ಹಳೆಯ ಪದ್ದತಿಯನ್ನು ಅಳವಡಿಸಿಕೊಂಡಿದ್ದಾರೆ, ಇದು ರೇಷ್ಮೆ ಕೃಷಿ ಕುಂಠಿತಕ್ಕೆ ಕಾರಣವಾಗಿದ್ದು ಅಭಿವೃದ್ಧಿಗೆ ಹಿನ್ನಡೆಯಾಗಿದೆ, ಅದಕ್ಕಾಗಿ ಪ್ರತಿಯೊಬ್ಬ ರೈತರು ಹೊಸ ತಾಂತ್ರಿಕತೆ, ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು‌ ರೇಷ್ಮೆ ಕೃಷಿಯ ಬಗ್ಗೆ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.

ವಿಜ್ಞಾನಿ ಡಾ.ಮಧುಸೂಧನ್ ಮಾತನಾಡಿ ಚೈನಾದಿಂದ ಭಾರತಕ್ಕೆ ಆಮದು ಆಗುತ್ತಿದ್ದ ರೇಷ್ಮೆ ಕಡಿಮೆಯಾಗುತ್ತಿದೆ, ರೇಷ್ಮೆ ಬೆಳೆಗಾರರಿಗೆ ಇದೊಂದು ವರದಾನವಾಗಿದ್ದು ನಾವು ಇನ್ನಷ್ಟು ಗುಣಮಟ್ಟದ ರೇಷ್ಮೆಯನ್ನು ಬೆಳೆಯುವಂತಾಗಬೇಕು, ನಮಗೆ ಬೇಕಾಗುವಷ್ಟು ರೇಷ್ಮೆಯನ್ನು ನಾವೇ ಉತ್ಪಾದನೆ ಮಾಡಿದರೆ ಅದು ನಮ್ಮ ರೈತರಿಗೆ ನೆಚ್ಚಿನ ಲಾಭವಾಗುತ್ತದೆ. ಅದಕ್ಕೆ ನಮ್ಮ ರೈತರನ್ನು ಸಿದ್ಧಗೊಳಿಸಬೇಕಿದೆ ಎಂದು ತಿಳಿಸಿದರು.

ಇಲಾಖೆಯ ಮಾರ್ಗದರ್ಶನದಲ್ಲಿ ರೇಷ್ಮೆ ಹೊಸ ನಾಟಿ ಮಾಡಬೇಕು, ಇಲಾಖೆಯ ಸವಲತ್ತುಗಳನ್ನು ಪಡೆದುಕೊಳ್ಳಬೇಕು. ಯುವಕರನ್ನು ರೇಷ್ಮೆ ಕಡೆಗೆ ವಾಲುವಂತೆ ಮಾಡಬೇಕು, ಅದಕ್ಕಾಗಿ ಇಲಾಖೆಯು ನಮ್ಮ ರೇಷ್ಮೆ ನಮ್ಮ ಹೆಮ್ಮೆ' ಕಾರ್ಯಕ್ರಮವನ್ನು ಹೋಬಳಿ ಮಟ್ಟದಲ್ಲಿ ನಡೆಸುತ್ತಿದೆ ಎಂದು ಹೇಳಿದರು.

ವಿಜ್ಞಾನಿ ಡಾ.ಸುರೇಶ್ ಮಾತನಾಡಿ ರೇಷ್ಮೆ ಕೃಷಿಯಲ್ಲಿ ಹೊಸ ತಂತ್ರಜ್ಞಾನದೊಂದಿಗೆ ಹೊಸ ಆವಿಷ್ಕಾರವಾಗಿದೆ, ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಪಡೆಯಬಹುದಾಗಿದೆ. ಗುಣಮಟ್ಟದ ರೇಷ್ಮೆ ಗೂಡನ್ನು ಬೆಳೆದು ಉತ್ತಮ ಬೆಲೆಯನ್ನು ಪಡೆಯಬಹುದಾಗಿದೆ. ರೈತರು ಮತ್ತು ಹೊಸ ಬೆಳೆಗಾರರು ಇಲಾಖೆಯಲ್ಲಿ ಸಿಗುವ ಹೊಸ ತಂತ್ರಜ್ಞಾನದ ತರಬೇತಿಯನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

ರೇಷ್ಮೆ ಬೆಳೆಗೆ ಹರಡುತ್ತಿರುವ ರೋಗವನ್ನು ತಡೆಗಟ್ಟಲು ರೈತರ ಸಹಕಾರ ಮುಖ್ಯವಾಗಿದೆ. ಅದನ್ನು ನಿಯಂತ್ರಿಸಲು ಏಕಕಾಲಕ್ಕೆ ರೈತರು ಔಷಧಿ ಸಿಂಪಡಿಸಬೇಕು. ಇಲಾಖೆಯ ಮಾರ್ಗದರ್ಶನದಲ್ಲಿ ರೋಗ ತಡೆಗಟ್ಟಲು ಎಲ್ಲಾ ರೈತರು ಸಹಕರಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ರೇಷ್ಮೆ ಬೆಳೆಗಾರರು ಪಾಲ್ಗೊಂಡಿದ್ದು ರೇಷ್ಮೆ ಕೃಷಿಗಾಗಿ ಪವರ್ ವೀಡರ್, ಮಿನಿ ಟ್ರಾಕ್ಟರ್, ಸ್ಪ್ರೇಯರನ್ನು ಸಹಾಯಧನದಲ್ಲಿ ಎಲ್ಲಾ ರೈತರಿಗೂ ನೀಡಬೇಕೆಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು.

ಚನ್ನಪಟ್ಟಣ ರೇಷ್ಮೆ ತರಬೇತಿ ಸಂಸ್ಥೆಯ ಸಹಾಯಕ ನಿರ್ದೇಶಕ ಮತ್ತುರಾಜು, ಕನಕಪುರ ರೇಷ್ಮೆ ತಾಂತ್ರಿಕ ಕೇಂದ್ರದ ಸಹಾಯಕ ನಿರ್ದೇಶಕ ಶಶಿಧರ್, ಸಾತನೂರು ರೇಷ್ಮೆ ವಲಯ ಅಧಿಕಾರಿ ಕುಮಾರಸ್ವಾಮಿ, ಇಲಾಖೆಯ ನೌಕರರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.