ADVERTISEMENT

ಮಾಗಡಿ: ಅಹಿಂಸೆ ಗೆಲುವಿಗೆ ಸೋಪಾನ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 5:11 IST
Last Updated 3 ಅಕ್ಟೋಬರ್ 2021, 5:11 IST
ಮಾಗಡಿ ಪಟ್ಟಣದ ಹೊಸ ಮಸೀದಿ ಮೊಹಲ್ಲಾದಲ್ಲಿ ಕರ್ನಾಟಕ ಸ್ವಾಭಿಮಾನಿ ಮುಸ್ಲಿಂ ಕನ್ನಡಿಗರ ರಕ್ಷಣಾ ವೇದಿಕೆಯ ತಾಲ್ಲೂಕು ಶಾಖೆಯಿಂದ ನಡೆದ ಗಾಂಧಿ ಜಯಂತಿಯಲ್ಲಿ ಅಧ್ಯಕ್ಷೆ ಜಯಲಕ್ಷ್ಮಮ್ಮ ರಾಷ್ಟ್ರಪಿತನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ತಬಸ್ಸುಮ್‌ ಸುಲ್ತಾನ, ಸೈಯದ್‌ ತೈಯಬ್‌, ಬಿ.ಬಿ. ಹಾಜಿರಾ, ಶಬಾನ, ನಾಗಮಣಿ, ರಮ್ಯಾ ಇದ್ದರು

ಮಾಗಡಿ: ‘ಹಿಂಸೆಯನ್ನು ಅಹಿಂಸೆಯಿಂದ ಗೆಲ್ಲಬೇಕು ಎಂಬ ಗಾಂಧೀಜಿ ಅವರ ಕನಸನ್ನು ನನಸು ಮಾಡೋಣ’ ಎಂದು ಕರ್ನಾಟಕ ಸ್ವಾಭಿಮಾನಿ ಮುಸ್ಲಿಂ ಕನ್ನಡಿಗರ ರಕ್ಷಣಾ ವೇದಿಕೆಯ ತಾಲ್ಲೂಕು ಶಾಖೆ ಅಧ್ಯಕ್ಷೆ ಜಯಲಕ್ಷ್ಮಮ್ಮ ಹೇಳಿದರು.

ಶನಿವಾರ ಕರ್ನಾಟಕ ಸ್ವಾಭಿಮಾನಿ ಮುಸ್ಲಿಂ ಕನ್ನಡಿಗರ ರಕ್ಷಣಾ ವೇದಿಕೆಯ ತಾಲ್ಲೂಕು ಶಾಖೆಯಲ್ಲಿ ನಡೆದ ಗಾಂಧಿ ಜಯಂತಿಯಲ್ಲಿ ಮಾತನಾಡಿದರು.

ವೇದಿಕೆಯ ರಾಜ್ಯ ಸಮಿತಿ ಸದಸ್ಯೆ ತಬಸ್ಸುಮ್‌ ಸುಲ್ತಾನ ಮಾತನಾಡಿ, ಜಾಗತಿಕ ಮತ್ತು ರಾಷ್ಟ್ರದ ಬಿಕ್ಕಟ್ಟಿನ ಸಂದರ್ಭದಲ್ಲಿ ಗಾಂಧೀಜಿ ನಮಗೆ ಪ್ರಸ್ತುತರಾಗುತ್ತಾರೆ ಎಂದರು.

ADVERTISEMENT

ಕಾರ್ಯದರ್ಶಿ ಸೈಯದ್‌ ತೈಯಬ್‌, ಸದಸ್ಯೆ ಬಿ.ಬಿ. ಹಾಜಿರಾ, ಶಬನಾ, ಸಲಿಮಾಭಾನು, ಜೋಯಾ, ಆಶಿಪ್‌ ಪಾಷಾ, ಇಮ್ರಾನ್‌, ನಾಗಮಣಿ, ರಮ್ಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.