ADVERTISEMENT

ಲೋಕ ಕಲ್ಯಾಣಕ್ಕೆ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2019, 14:22 IST
Last Updated 12 ಮಾರ್ಚ್ 2019, 14:22 IST
ನಗರದ ಕೋಟೆಯಲ್ಲಿನ ಶೃಂಗೇರಿ ಶಂಕರ ಮಠದಲ್ಲಿ ನಡೆದ ಚಂಡಿಹೋಮ
ನಗರದ ಕೋಟೆಯಲ್ಲಿನ ಶೃಂಗೇರಿ ಶಂಕರ ಮಠದಲ್ಲಿ ನಡೆದ ಚಂಡಿಹೋಮ   

ಕನಕಪುರ: ನಗರದ ಕೋಟೆಯಲ್ಲಿನ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ಚಂಡಿ ಹೋಮ ನಡಸಲಾಯಿತು. ಭಾರತಿ ತೀರ್ಥಸ್ವಾಮಿ ಹಾಗೂ ವಿಧುಶೇಖರ ಭಾರತಿ ಸ್ವಾಮಿಗಳ ನೇತೃತ್ವದಲ್ಲಿ 8ನೇ ವರ್ಷದ ಪ್ರತಿಷ್ಠಾಪನ ವರ್ಧಂತಿ ಮಹೋತ್ಸವ ನಡೆಯಿತು.

ಶ್ರೀಶಾರದಾ ಪರಮೇಶ್ವರಿ, ಶ್ರೀಶಂಕರ ಭಗವತ್ಪಾದಾಚಾರ್ಯ, ಮಹಾಗಣಪತಿ ದೇವರುಗಳ ಪ್ರತಿಷ್ಠಾಪನೆ ಮಾಡಲಾಯಿತು. 8ನೇ ವರ್ಷದ ವರ್ಧಂತಿ ಕಾರ್ಯಕ್ರಮದ ಅಂಗವಾಗಿ ಹೂವಿನ ಅಲಂಕಾರ,ಪಂಚಾಮೃತ ಅಭಿಷೇಕ, ಲಕ್ಷ ಕುಂಕುಮಾರ್ಚನೆಯನ್ನು ಏರ್ಪಡಿಸಲಾಗಿತ್ತು. ಪೂಜೆಯಲ್ಲಿ ಸುಹಾಸಿನಿ ಪಾಲ್ಗೊಂಡಿದ್ದರು.

ಚಂಡಿಹೋಮವನ್ನು ಕೇಶವಭಟ್, ಸೂರ್ಯನಾರಾಯಣ್, ರಘುರಾಮ್, ರಮೇಶ್ ಭಟ್, ಗಣೇಶ ಭಟ್, ರವೀಂದ್ರ ಭಟ್, ದತ್ತಾತ್ರೇಯ ನಡೆಸಿಕೊಟ್ಟರು.

ADVERTISEMENT

ನೂರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಶ್ರೀ ಮಠದ ಮುಖ್ಯಸ್ಥ ಬಿ.ಎನ್.ಪ್ರಕಾಶ್ ಮೂರ್ತಿ ಮಹಾ ಮಂಗಳಾರತಿಯ ನಂತರ ತೀರ್ಥ ಪ್ರಸಾದ ವಿನಿಯೋಗ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.