ADVERTISEMENT

ರಂಗೇನಹಳ್ಳಿಯಲ್ಲಿ ಬಿರುಗಾಳಿ: ಬಾಳೆ ಬೆಳೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 24 ಮೇ 2019, 13:22 IST
Last Updated 24 ಮೇ 2019, 13:22 IST
ಮಾಗಡಿ ತಾಲ್ಲೂಕಿನ ರಂಗೇನಹಳ್ಳಿಯಲ್ಲಿ ಬಿರುಗಾಳಿ ಮಳೆಗೆ ಸಿಲುಕಿ ಧರೆಗೆ ಉರುಳಿರುವ ರೈತ ಜಯಣ್ಣ ಅವರ ಬಾಳೆಗೊನೆ ತೋಟ
ಮಾಗಡಿ ತಾಲ್ಲೂಕಿನ ರಂಗೇನಹಳ್ಳಿಯಲ್ಲಿ ಬಿರುಗಾಳಿ ಮಳೆಗೆ ಸಿಲುಕಿ ಧರೆಗೆ ಉರುಳಿರುವ ರೈತ ಜಯಣ್ಣ ಅವರ ಬಾಳೆಗೊನೆ ತೋಟ   

ಮಾಗಡಿ: ರಂಗೇನಹಳ್ಳಿಯಲ್ಲಿ ಗುರುವಾರ ಸಂಜೆ ಗುಡುಗು, ಮಿಂಚು ಸಹಿತ ಬೀಸಿದ ಬಿರುಗಾಳಿಗೆ ರೈತ ಜಯಣ್ಣ ಅವರ ಫಲಭರಿತ ಬಾಳೆ ತೋಟದ ಬಹುತೇಕ ಮರಗಳು ಧರೆಗೆ ಉರುಳಿವೆ.

ಮುಂದಿನ ವಾರ ಕಟಾವು ಮಾಡಬೇಕಿದ್ದ ಪಚ್ಚಬಾಳೆಯ 55 ಗಿಡಗಳು ಗೊನೆಗಳ ಸಹಿತ ಉರುಳಿ ಬಿದ್ದಿವೆ.

ರಂಗೇನಹಳ್ಳಿ, ನಾಯಕನಪಾಳ್ಯ, ಸಾವನದುರ್ಗ, ಹೊಸಪಾಳ್ಯ ಸುತ್ತಲಿನ ಪ್ರದೇಶದಲ್ಲಿ ಬಿರುಗಾಳಿಯಿಂದ ಬೆಳೆ ನಷ್ಟವುಂಟಾಗಿದ್ದು ರೈತರ ನೆರವಿಗೆ ಸರ್ಕಾರ ಮುಂದಾಗಬೇಕು ಎಂದು ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಹೊಸಪಾಳ್ಯ ಲೋಕೇಶ್‌ ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.