ADVERTISEMENT

ಕಾರಾಗೃಹದಿಂದ ಹೊರ ಬಂದ ಆರೋಪಿ ಸ್ವಾಮೀಜಿಗೆ ಭರ್ಜರಿ ಸ್ವಾಗತ

ಸೇಬಿನ ಹಾರ ಹಾಕಿ ಸಂಭ್ರಮದಿಂದ ಕರೆದೊಯ್ದ ಭಕ್ತರು

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 23:03 IST
Last Updated 18 ಜನವರಿ 2023, 23:03 IST
ರಾಮನಗರ ಜಿಲ್ಲಾ ಕಾರಾಗೃಹದ ಹೊರಗೆ ಮೃತ್ಯುಂಜಯ ಸ್ವಾಮೀಜಿಗೆ ಸೇಬಿನ ಹಾರ ಹಾಕಿ ಬರಮಾಡಿಕೊಂಡ ಭಕ್ತರು
ರಾಮನಗರ ಜಿಲ್ಲಾ ಕಾರಾಗೃಹದ ಹೊರಗೆ ಮೃತ್ಯುಂಜಯ ಸ್ವಾಮೀಜಿಗೆ ಸೇಬಿನ ಹಾರ ಹಾಕಿ ಬರಮಾಡಿಕೊಂಡ ಭಕ್ತರು   

ರಾಮನಗರ: ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ಮೊದಲ ಆರೋಪಿ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ ಬುಧವಾರ ಸಂಜೆ ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದಿದ್ದಾರೆ. ಭಕ್ತರು ಅವರಿಗೆ ಹಾರ ಹಾಕಿ ಬರಮಾಡಿಕೊಂಡಿದ್ದಾರೆ.

ರಾಮನಗರ ಜಿಲ್ಲಾ ಕಾರಾಗೃಹದಿಂದ ಅವರು ಹೊರ ಬರುತ್ತಿದ್ದಂತೆಯೇ ಭಕ್ತರು ಸೇಬಿನ ಹಾರ ಹಾಕಿ ಅದ್ದೂರಿ ಸ್ವಾಗತ ನೀಡಿ ಸಂಭ್ರಮದಿಂದ ಕರೆದೊಯ್ದರು.

ಕಳೆದ ಅಕ್ಟೋಬರ್ 24ರಂದು ಬಂಡೆಮಠದ ಶ್ರೀಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಸಾವಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಮೃತ್ಯುಂಜಯ ಸ್ವಾಮೀಜಿ ಬಂಧನಕ್ಕೆ ಒಳಗಾಗಿದ್ದರು.

ADVERTISEMENT

ಎರಡೂವರೆ ತಿಂಗಳ ಜೈಲುವಾಸದ ಬಳಿಕ ಅವರಿಗೆ ಹೈಕೋರ್ಟ್ ಇದೇ 13ರಂದು ಜಾಮೀನು ಮಂಜೂರು ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.