ADVERTISEMENT

ಸಂಚಾರ ನಿಯಮ ಪಾಲಿಸಲು ಜಾಗೃತಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 13:15 IST
Last Updated 8 ಅಕ್ಟೋಬರ್ 2019, 13:15 IST
ಕನಕಪುರದಲ್ಲಿ ಪೊಲೀಸರು ಸಂಚಾರ ನಿಯಮ ಪಾಲಿಸಲು ಬೈಕ್‌ ರ‍್ಯಾಲಿ ನಡೆಸಿ ಜಾಗೃತಿ ಮೂಡಿಸಿದರು
ಕನಕಪುರದಲ್ಲಿ ಪೊಲೀಸರು ಸಂಚಾರ ನಿಯಮ ಪಾಲಿಸಲು ಬೈಕ್‌ ರ‍್ಯಾಲಿ ನಡೆಸಿ ಜಾಗೃತಿ ಮೂಡಿಸಿದರು   

ಕನಕಪುರ: ಮನುಷ್ಯನಿಗೆ ಪ್ರಾಣ ಅತ್ಯಂತ ಅಮೂಲ್ಯ. ಒಮ್ಮೆ ಜೀವ ಕಳೆದುಕೊಂಡರೆ ಹೋದ ಜೀವ ಮತ್ತೊಮ್ಮೆ ವಾಪಸು ಬರುವುದಿಲ್ಲ ಎಂದು ಎರಡನೇ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಧೀಶ ಶಂಕರಪ್ಪ ನಿಂಬಣ್ಣ ಕಲ್ಕಣಿ ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ತಾಲ್ಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಸಾಕ್ಷರತಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೋಟಾರು ಕಾಯ್ದೆಯಡಿ ಹಲವು ಸುರಕ್ಷತಾ ಕಾನೂನುಗಳಿವೆ. ಅವುಗಳನ್ನು ಜನರಿಗೆ ತೊಂದರೆ ಕೊಡುವ ಉದ್ದೇಶದಿಂದ ಮಾಡಿಲ್ಲ. ಬದಲಾಗಿ ಸಾರ್ವಜನಿಕರ ಅನುಕೂಲಕ್ಕೆ ಹಾಗೂ ಸುರಕ್ಷತಾ ಸಂಚಾರಕ್ಕಾಗಿ ಕಾನೂನು ಮಾಡಲಾಗಿದೆ ಎಂದರು.

ADVERTISEMENT

ಪ್ರಧಾನ ಸಿವಿಲ್‌ ನ್ಯಾಯಾಧೀಶ ಜಿ.ಎಚ್‌.ಹನುಮಂತ ಮಾತನಾಡಿ, ನಾಲ್ಕು ದಿನಗಳಿಂದ ತಾಲ್ಲೂಕಿನಲ್ಲಿ ಕಾನೂನು ಅರಿವು ಮೂಡಿಸುವ ಕೆಲಸ ನಡೆಯುತ್ತಿದೆ. ಸಾರ್ವಜನಿಕರಿಗೆ ಕಾನೂನಿನ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು..

ಸಿವಿಲ್‌ ನ್ಯಾಯಾಧೀಶ ಸಂತೋಷಕುಮಾರ್‌, ತಹಶೀಲ್ದಾರ್‌ ಎಂ.ಆನಂದಯ್ಯ, ಸರ್ಕಲ್‌ ಇನ್‌ಸ್ಪೆಕ್ಟರ್‌ ಕೆ.ಮಲ್ಲೇಶ್‌, ವಕೀಲರಾದ ರಾಮಚಂದ್ರ, ಗೋಪಾಲಗೌಡ ಇದ್ದರು.

‌ಪೊಲೀಸರು ನಗರದಲ್ಲಿ ಬೈಕ್‌ ಜಾಥಾ ನಡೆಸಿ ಸಂಚಾರ ನಿಯಮದ ಬಗ್ಗೆ ಜಾಗೃತಿ ಮೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.