ಹಾರೋಹಳ್ಳಿ: ಬಸವ ಜಯಂತಿ ಪ್ರಯುಕ್ತ ಅರಿಹಂತ್ ಇನ್ಸಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್ ಸಂಸ್ಥೆ ಬುಧವಾರ ಆನೇಕಲ್ ರಸ್ತೆಯಲ್ಲಿ ಶಾಂತಿಯುತ ನಡಿಗೆ (ಜಾಥಾ) ಹಮ್ಮಿಕೊಂಡಿತ್ತು.
ಸಂಸ್ಥೆಯ ನೂರಾರು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಪಟ್ಟಣದಲ್ಲಿ ಜಾಥಾ ನಡೆಸಿದರು. ಬುದ್ಧ, ಬಸವಣ್ಣನ ಪರ ಜೈಘೋಷ ಕೂಗಿದರು.
ದೇಶವನ್ನು ಕಾಡುತ್ತಿರುವ ಜಾತಿ,ಧರ್ಮ, ಮೇಲುಕೀಳು ಭಾವನೆಗಳ ವಿರುದ್ಧ ಬುದ್ಧ, ಬಸವಣ್ಣ ಹೋರಾಡಿದರು ಎಂದು ಪ್ರಾಂಶುಪಾಲ ಡಾ.ಅನಿಲ್ ಕುಮಾರ್ ಹೇಳಿದರು. ಬುದ್ಧ,ಬಸವ ಮಾರ್ಗದಲ್ಲಿ ನಡೆಯುವಂತೆ ಸಂಸ್ಥೆ ನಿರ್ದೇಶಕ ಡಾ.ಸಿ.ಗಿರೀಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.