ADVERTISEMENT

ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿನಿಲಯದ ಚುನಾವಣೆ: ಯೋಗೀಶ್ ತಂಡಲ್ಲೆ ಜಯ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 2:53 IST
Last Updated 23 ಫೆಬ್ರುವರಿ 2021, 2:53 IST
ಚನ್ನಪಟ್ಟಣದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಆಡಳಿತ ಮಂಡಳಿಗೆ ಆಯ್ಕೆಯಾದ ನೂತನ ನಿರ್ದೇಶಕರು
ಚನ್ನಪಟ್ಟಣದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಆಡಳಿತ ಮಂಡಳಿಗೆ ಆಯ್ಕೆಯಾದ ನೂತನ ನಿರ್ದೇಶಕರು   

ಚನ್ನಪಟ್ಟಣ: ಭಾರೀ ಕುತೂಹಲ ಕೆರಳಿಸಿದ್ದ ಪಟ್ಟಣದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿನಿಲಯದ ಆಡಳಿತ ಮಂಡಳಿ ಚುನಾವಣೆಯಲ್ಲಿ ಟಿ.ಕೆ. ಯೋಗೀಶ್ ತಂಡದ 10 ಮಂದಿ ಜಯಭೇರಿ ಬಾರಿಸುವುದರೊಂದಿಗೆ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿದಿದ್ದಾರೆ.

ಭಾನುವಾರ ಪಟ್ಟಣದ ಸಂಸ್ಥೆಯ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಕಳೆದ ಸಾಲಿನ ಆಡಳಿತ ಮಂಡಳಿಯಲ್ಲಿದ್ದ 6 ಮಂದಿ ನಿರ್ದೇಶಕರು ಹಾಗೂ 4 ನಿರ್ದೇಶಕರು ಸೇರಿದಂತೆ ಈ ತಂಡದ 10 ನಿರ್ದೇಶಕರು ಆಯ್ಕೆಯಾಗಿದ್ದಾರೆ. ಉಳಿದಂತೆ ಸಮಾನ ಮನಸ್ಕರ ತಂಡದ 2 ಮಂದಿ, ಪಕ್ಷೇತರರಾಗಿ ಸ್ಪರ್ಧಿಸಿದ್ದ 3 ನಿರ್ದೇಶಕರು
ಆಯ್ಕೆಯಾಗಿದ್ದಾರೆ.

ಯೋಗೀಶ್ ತಂಡದಿಂದ ಟಿ.ಕೆ. ಯೋಗೀಶ್, ಸಿಂ.ಲಿಂ. ನಾಗರಾಜು, ಎಸ್.ಟಿ. ನಾರಾಯಣಗೌಡ, ಆರ್. ರಂಗಸ್ವಾಮಿ, ಎನ್.ಎಂ. ಶಂಭೂಗೌಡ, ಸಿ. ಚನ್ನಪ್ಪ, ಟಿ.ಪಿ. ಹನುಮಂತಯ್ಯ, ಕೆಂಚೇಗೌಡ, ಎಸ್. ಮಹೇಶ್ವರ್, ಎಸ್. ಉಮಾಶಂಕರ್ ಆಯ್ಕೆಯಾದರು. ಸಮಾನ ಮನಸ್ಕರ ತಂಡದ ವಿ.ಬಿ. ಚಂದ್ರಯ್ಯ, ವೆಂಕಟರಾಮೇಗೌಡ, ಪಕ್ಷೇತರವಾಗಿ ಸ್ಪರ್ಧಿಸಿದ್ದ ಎ.ಎಂ. ಅನಂತಮೂರ್ತಿ, ಮೆಹರೀಶ್, ಮಹಿಳಾ ಅಭ್ಯರ್ಥಿ ಎಂ.ಎ. ಮಾಲಿನಿ ಆಯ್ಕೆಯಾಗಿದ್ದಾರೆ. ಭಾನುವಾರ ಬೆಳಿಗ್ಗೆ ಚುನಾವಣೆ ನಡೆದು ಸಂಜೆ ವೇಳೆಗೆ ಎಣಿಕೆ ಕಾರ್ಯ ನಡೆಯಿತು. ರಾತ್ರಿ 10 ಗಂಟೆ ವೇಳೆಗೆ ಫಲಿತಾಂಶ ಪ್ರಕಟಿಸಲಾಯಿತು. ಒಟ್ಟು 47 ಮಂದಿ ಕಣದಲ್ಲಿದ್ದರು. ಸಂಸ್ಥೆಯಲ್ಲಿ ಒಟ್ಟು 3,800 ಮಂದಿ ಮತದಾರರಿದ್ದು, ಅವರಲ್ಲಿ ಒಟ್ಟು 2,884 ಮಂದಿ ತಮ್ಮ ಹಕ್ಕು ಚಲಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.