ADVERTISEMENT

ಅಚ್ಚರಿ ಮೂಡಿಸಿದ ಯಡಿಯೂರಪ್ಪ ಉಪಸ್ಥಿತಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 9:50 IST
Last Updated 14 ಅಕ್ಟೋಬರ್ 2011, 9:50 IST

ಶಿವಮೊಗ್ಗ: ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯ ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುಳಿತಿದ್ದು ಎಲ್ಲರ ಹುಬ್ಬೇರಿಸಿತು.

ಸದಾನಂದಗೌಡ ಅವರು ಮಾತನಾಡಿ ಮುಗಿಸುವವರೆಗೂ ಸುಮ್ಮನೆ ಕುಳಿತಿದ್ದ ಯಡಿಯೂರಪ್ಪ, ಕೊನೆಯಲ್ಲಿ, ತಾವು ಜಿಲ್ಲೆಗೆ ನೀಡಿದ ವಿಶೇಷ ಅನುದಾನಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು; ಹಾಗೆಯೇ, ಜಿಲ್ಲೆಗೆ ಬಜೆಟ್‌ನಲ್ಲಿ ಘೋಷಿಸಿದ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಕೈಗೆತ್ತಿಕೊಳ್ಳಬೇಕು ಎಂದು ಸಲಹೆ ರೂಪದ ಸೂಚನೆ ನೀಡಿದರು.

ಸಭೆಯ ಮಧ್ಯೆ ಗಾಂಧಿ ಪಾರ್ಕ್‌ಗೆ ಬಾಕಿ ್ಙ ಐದು ಕೋಟಿ ನೀಡುವಂತೆ ಹೇಳಿದಾಗ, ಅದಕ್ಕೆ ಪ್ರತಿಕ್ರಿಯಿಸಿದ ಸದಾನಂದಗೌಡ, `ಯಡಿಯೂರಪ್ಪ ಅವರು ಆದೇಶ ಮಾಡಿದ್ದಾರೆ; ಅದರಂತೆ ್ಙ ಐದು ಕೋಟಿ ತಕ್ಷಣ ಬಿಡುಗಡೆ ಮಾಡಲಾಗುವುದು~ ಎಂದರು.


 ಸಭೆಯ ಹೆಚ್ಚಿನ ಸಮಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಗಿಂತ ಶಾಸಕರಾದ ಕಿಮ್ಮೆನೆ ರತ್ನಾಕರ, ಬೇಳೂರು ಗೋಪಾಲಕೃಷ್ಣ, ಕೆ.ಜಿ. ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಭಾರತಿ ಶೆಟ್ಟಿ, ಆರ್.ಕೆ. ಸಿದ್ದರಾಮಣ್ಣ ಕ್ಷೇತ್ರದ ಸಮಸ್ಯೆಗಳನ್ನು ಆಲಿಸುವುದರಲ್ಲಿ ಕಳೆಯಿತು.

ಸಭೆಯಲ್ಲಿ ಪಾಲ್ಗೊಳ್ಳಲು ಜಿ.ಪಂ. ಕಚೇರಿ ಬಾಗಿಲುವರೆಗೆ ಬಂದು ಶಾಸಕ ಕೆ.ಎಸ್. ಈಶ್ವರಪ್ಪ ಹಿಂತಿರುಗಿದ್ದು ನಿಗೂಢವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT