ಭದ್ರಾವತಿ: ಮಕ್ಕಳಲ್ಲಿ ಓದುವ ಪರಿಪಾಠ ಹೆಚ್ಚು ಮಾಡುವ ಕಡೆ ಪೋಷಕರು ಮುತುವರ್ಜಿ ವಹಿಸಬೇಕು ಎಂದು ನಾಡಿನ ಖ್ಯಾತ ಸಾಹಿತಿ ನಾ.ಡಿಸೋಜ ಹೇಳಿದರು.
ಇಲ್ಲಿನ ನ್ಯೂಟೌನ್ ವಿಶ್ವನಿಕೇತನ ನಮ್ಮ ಮನೆ ಗ್ರಂಥಾಲಯ ಕೊಠಡಿ ಉದ್ಘಾಟಿಸಿ ಮಾತನಾಡಿದ ಅವರು, ರತ್ನಾ ಸಂಗಮೇಶ್ ಅವರು, ತಮ್ಮ ಮನೆಯಲ್ಲಿನ ಒಂದು ಕೊಠಡಿಯಲ್ಲಿ ಈ ಕೆಲಸ ಮಾಡಲು ಹೊರಟಿರುವುದು ಮೆಚ್ಚುವಂತದ್ದು ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ್, ಡಾ. ವೀಣಾಭಟ್, ಡಾ. ವೃಂದಾಭಟ್, ಎಸ್. ಕೃಷ್ಣ ಮೂರ್ತಿ, ರವಿಕುಮಾರ್ ಗೌಡ, ಚಂದ್ರಶೇಖರ ಚಕ್ರಸಾಲಿ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.