ADVERTISEMENT

ಕಲ್ಯಾಣ ಚಾಲುಕ್ಯರ ಕಾಲದ ಅವಶೇಷಗಳು ಪತ್ತೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2017, 5:52 IST
Last Updated 19 ಡಿಸೆಂಬರ್ 2017, 5:52 IST

ಸಾಗರ: ಇಲ್ಲಿನ ಎಸ್‌ಪಿಎಂ. ರಸ್ತೆಯಲ್ಲಿರುವ ಜೈನ ಮಂದಿರದ ಸಮೀಪ ಕಲ್ಯಾಣ ಚಾಲುಕ್ಯರ ಕಾಲದ್ದು ಎನ್ನಲಾದ ಪುರಾತನ ಅವಶೇಷಗಳು ಪತ್ತೆಯಾಗಿವೆ.

ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಪುರಾತನ ಕೇಶವ ದೇವಾಲಯದ್ದು ಎನ್ನಲಾಗಿರುವ ಪಾಣಿಪೀಠ, ಜಲಾರಿ, ಗರ್ಭಗೃಹದ ಕಂಬಗಳು, ಗೋಡೆಯ ಕಲ್ಲು, ಚಪ್ಪಡಿ, ತುಳಸಿಕಟ್ಟೆಯ ಅವಶೇಷಗಳು ದೊರಕಿವೆ.

ಇಲ್ಲಿರುವ ದೇವಾಲಯದ ಕೇಶವಮೂರ್ತಿ ವಿಗ್ರಹವನ್ನು ಕಳ್ಳರು ಕಳ್ಳತನ ಮಾಡಲು ಪ್ರಯತ್ನ ನಡೆಸಿದ್ದ ಹಿನ್ನೆಲೆಯಲ್ಲಿ ಅದನ್ನು ಶಿವಮೊಗ್ಗದ ವಸ್ತು ಸಂಗ್ರಹಾಲಯಕ್ಕೆ ಕಳುಹಿಸಿಕೊಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.