ರಿಪ್ಪನ್‌ಪೇಟೆ: ಬೇಸಿಗೆ ಬಂತೆಂದರೆ ಕುಡಿಯುವ ನೀರಿಗೆ ತತ್ವಾರ. ಎಲ್ಲೆಡೆ ಬತ್ತಿದ ಬಾವಿಯ ದರ್ಶನ ಇನ್ನೊಂದೆಡೆ ಹನಿ ನೀರಿಗೂ ಪರದಾಟ. ಆದರೆ, ವಿಪರ್ಯಾಸ ಎಂದರೆ ಇರುವ ನೀರನ್ನು ಸಮರ್ಪಕ ಆಗಿ ಬಳಕೆ ಮಾಡಬೇಕಾದ ಗ್ರಾಮಾಡಳಿತದ್ದು ಮಾತ್ರ ದಿವ್ಯ ನಿರ್ಲಕ್ಷ್ಯ.
ಇಲ್ಲಿನ ಶಬರೀಶ ನಗರದಲ್ಲಿ ಕಳೆದ 6 ತಿಂಗಳಿಂದ ನೀರು ವ್ಯರ್ಥವಾಗಿ ಪೋಲಾಗುತ್ತಿದ್ದರೂ, ದುರಸ್ತಿ ಕಾರ್ಯ ಕೈಗೊಂಡಿಲ್ಲ.ಅಲ್ಲದೇ, ಸ್ಥಳೀಯವಾಗಿ ಗ್ರಾಮ ಪಂಚಾಯ್ತಿ ಸದಸ್ಯರು ಇಲ್ಲಿದ್ದರೂ ಈ ಬಗ್ಗೆ ಗಮನಹರಿಸದೇ ಇರುವುದು ಇವರ ಕಾರ್ಯ ವೈಖರಿ ಬಗ್ಗೆ ಜನತೆ ಮಾತನಾಡಿ ಕೊಳ್ಳುವಂತಾಗಿದೆ.
ಈ ಸೋರಿಕೆಯ ನೀರಿನ ಗುಂಡಿಯಲ್ಲಿ ಚಪ್ಪಲಿ, ಕಸಕಡ್ಡಿ ಸೇರಿದಂತೆ ಕಲ್ಮಶಗಳಿಂದ ತುಂಬಿದ್ದು, ನಂತರ ಇದೇ ಕಲುಷಿತ ನೀರು ನಲ್ಲಿ ಮೂಲಕ ಸ್ಥಳೀಯ ನಿವಾಸಿಗಳಿಗೆ ನಿತ್ಯವೂ ಪೊರೈಕೆಯಾಗುತ್ತಿದೆ.
ಇದೆ ನೀರನ್ನು ಸಾರ್ವಜನಿಕರು ಕುಡಿಯಲು ಹಾಗೂ ಇತರೆ ಬಳಕೆಗೆ ಬಳಸುತ್ತಿದ್ದು ತಕ್ಷಣವೇ ಈ ಬಗ್ಗೆ ಗ್ರಾಮಾಡಳಿತ ದುರಸ್ತಿ ಕಾರ್ಯ ನಿರ್ವಹಿಸಿ ಯೋಗ್ಯವಾದ ನೀರು ಪೊರೈಕೆಗೆ ಕ್ರಮ ಕೈಗೊಂಡು ರೋಗ ಹರಡದಂತೆ ಮುಂಜಾಗ್ರತೆ ವಹಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.