ADVERTISEMENT

ಚುನಾಯಿತ ಪ್ರತಿನಿಧಿಗಳು ಜನಸೇವಕರು

​ಪ್ರಜಾವಾಣಿ ವಾರ್ತೆ
Published 31 ಜನವರಿ 2012, 19:30 IST
Last Updated 31 ಜನವರಿ 2012, 19:30 IST
ಚುನಾಯಿತ ಪ್ರತಿನಿಧಿಗಳು ಜನಸೇವಕರು
ಚುನಾಯಿತ ಪ್ರತಿನಿಧಿಗಳು ಜನಸೇವಕರು   

ಭದ್ರಾವತಿ: ~ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಾವು ಆಯ್ಕೆ ಮಾಡುವ ಪ್ರತಿನಿಧಿಗಳು ಜನ ಸೇವಕರು, ಅವರು ನಮ್ಮನ್ನಾಳುವ ಜನರಲ್ಲ~ ಎಂದು ನಿವೃತ್ತ ನ್ಯಾಯಮೂರ್ತಿ, ಮಾಜಿ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಹೇಳಿದರು.

ಇಲ್ಲಿನ ಎಂಪಿಎಂ ಕಲ್ಯಾಣ ಮಂದಿರದಲ್ಲಿ ಆದಿ ಚುಂಚನಗಿರಿ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ಮಂಗಳವಾರ ~ವಿದ್ಯಾರ್ಥಿ ಮತ್ತು ಭ್ರಷ್ಟಾಚಾರ ವಿರುದ್ಧದ ಅಂದೋಲನ~ ಸಂವಾದದಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಬಂದ ನಂತರ ರಚಿತವಾದ ಸಂವಿಧಾನದಲ್ಲಿ ಸ್ವತಃ ~ನಾವು ಒಪ್ಪಿಕೊಂಡಿರುವ ಜನರಿಂದ, ಜನರಿಗಾಗಿ, ಚುನಾಯಿತವಾದ ಸರ್ಕಾರ~ ಎಂದು ಹೇಳಿರುವ ಅಂಶವು ಶಾಸಕಾಂಗದ ಕರ್ತವ್ಯವನ್ನು ತಿಳಿಸುತ್ತದೆ. ಆದರೆ, ಇದನ್ನು ಮರೆತ ಪ್ರತಿನಿಧಿಗಳು ನಮ್ಮನ್ನಾಳುವ ಭರದಲ್ಲಿ ಸೇವೆಯ ಅಂಶ ಮರೆತಿದ್ದಾರೆ ಎಂದು ಲೇವಡಿ ಮಾಡಿದರು.

ಭ್ರಷ್ಟಾಚಾರ ಸಂಪೂರ್ಣ ನಿಗ್ರಹ ಮಾಡುವ ನಿಟ್ಟಿನಲ್ಲಿ ಲೋಕಾಯುಕ್ತ ಕೆಲಸ ಮಾಡಲು ಸಾಧ್ಯವಿಲ್ಲ. ಆದರೆ, ಅದಕ್ಕೆ ಕಡಿವಾಣ ಹಾಕುವ ಕಡೆ ಗಮನಹರಿಸಿ ಈಗಾಗಲೇ ತನ್ನ ಕೆಲಸವನ್ನು ನಿರ್ವಹಿಸಿದೆ. ಅದನ್ನು ಮುನ್ನೆಡೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಬೆಳೆಯುತ್ತಿರುವ ಯುವ ಸಮುದಾಯ ಎಲ್ಲವನ್ನು ತೊಡೆದು ಹಾಕುವ ದೃಢ ನಿಶ್ಚಯದ ಆತ್ಮವಿಶ್ವಾಸದ ಹೆಜ್ಜೆ ಇಡುವ ಅಗತ್ಯವಿದೆ. ಇದಕ್ಕಾಗಿ ನನ್ನ ಕೊಡುಗೆ ಏನು ಎಂದು ಯೋಚಿಸುವ ಮನೋಭಾವ ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದ ಪ್ರಸನ್ನನಾಥ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟ್ ಅಕಾಡೆಮಿ ಸಲಹೆಗಾರ ಪ್ರೊ.ಬಿ.ಆರ್. ವಿಜಯವಾಮನ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.