ADVERTISEMENT

ಜೀವವಿಮಾ ಪ್ರತಿನಿಧಿಗಳ ಕೊಡುಗೆ ಅಮೂಲ್ಯ

​ಪ್ರಜಾವಾಣಿ ವಾರ್ತೆ
Published 28 ಮೇ 2012, 10:15 IST
Last Updated 28 ಮೇ 2012, 10:15 IST

ಸಾಗರ: ಭಾರತೀಯ ಜೀವವಿಮಾ ನಿಗಮ ಸಾಧಿಸುತ್ತಿರುವ ಪ್ರಗತಿಯಲ್ಲಿ ಜೀವವಿಮಾ ಪ್ರತಿನಿಧಿಗಳು ನೀಡುತ್ತಿರುವ ಕೊಡುಗೆ ಅಮೂಲ್ಯ ಎಂದು ನಿಗಮದ ಸ್ಥಳೀಯ ಶಾಖೆಯ ಅಧಿಕಾರಿ ಎಚ್.ಎನ್. ಕೃಷ್ಣಮೂರ್ತಿ ಹೇಳಿದರು.

ಶನಿವಾರ ನಡೆದ ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳ ವಾರ್ಷಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ಖಾಸಗಿ ವಿಮಾ ಕಂಪೆನಿಗಳು ಭಾರತಕ್ಕೆ ಪ್ರವೇಶಿಸುತ್ತಿವೆ. ಆದರೂ ಇಂದಿಗೂ ದೇಶದಲ್ಲಿ ಜನರ ವಿಶ್ವಾಸಾರ್ಹತೆ ಉಳಿಸಿಕೊಂಡಿರುವ ವಿಮಾ ಕಂಪೆನಿಗಳ ಪೈಕಿ ಭಾರತೀಯ ಜೀವವಿಮಾ ನಿಗಮಕ್ಕೆ ಅಗ್ರಸ್ಥಾನ ಸಲ್ಲುತ್ತದೆ ಎಂದರು.

ಜೀವವಿಮಾ ಪ್ರತಿನಿಧಿಗಳು ತಮ್ಮ ವೃತ್ತಿಯಲ್ಲಿ ಕೌಶಲವನ್ನು ವೃದ್ಧಿಸಿಕೊಳ್ಳುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಅವರಿಗೆ ವಿವಿಧ ರೀತಿಯ ತರಬೇತಿಗಳನ್ನು ನೀಡಿ ಕ್ರಿಯಾಶೀಲಗೊಳಿಸುವ ಕೆಲಸವನ್ನು ನಿಗಮ ಮಾಡುತ್ತಿದೆ ಎಂದು ಹೇಳಿದರು.

ಭಾರತೀಯ ಜೀವವಿಮಾ ನಿಗಮ ಪ್ರತಿನಿಧಿಗಳ ಸಂಘದ ಸ್ಥಳೀಯ ಶಾಖೆ ಕಾರ್ಯದರ್ಶಿ ಜಿ.ಎಸ್.ವೆಂಕಟೇಶ್ ಮಾತನಾಡಿ, ಜೀವವಿಮಾ ಪ್ರತಿನಿಧಿಗಳ ಹಿತಕ್ಕೆ ಧಕ್ಕೆಯಾಗುವ ಕೆಲವು ಕಾನೂನು ತಿದ್ದುಪಡಿಗಳು ಆಗುತ್ತಿವೆ. ಇದಕ್ಕೆ ಸಂಘಟನೆಯ ಮೂಲಕ ಪ್ರತಿನಿಧಿಗಳು ಪ್ರತಿರೋಧವನ್ನು ತೋರಬೇಕಿದೆ ಎಂದರು.

ಜೀವವಿಮಾ ಪ್ರತಿನಿಧಿಗಳ ಸಂಘದ ತಾಲ್ಲೂಕು ಶಾಖೆ ಅಧ್ಯಕ್ಷ ದಳವಾಯಿ ದಾನಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಸಂಘದ ಅಧ್ಯಕ್ಷ ಶಿವಕುಮಾರ್ ಜಿ. ಆಲದಹಳ್ಳಿ, ಸಲಹಾ ಸಮಿತಿ ಅಧ್ಯಕ್ಷ ರಾಮರಾವ್, ಸೂಗೂರು ಬಿ.ರವಿ, ಜೀವವಿಮಾ ನಿಗಮದ ಸ್ಥಳೀಯ ಶಾಖೆ ಉಪ ಶಾಖಾಧಿಕಾರಿ ಎನ್. ಗೋಪಾಲಕೃಷ್ಣ, ಶಿವಾನಂದ, ಬೆಂಡಿಕ್ಟ್ ಜೋಸೆಫ್ ಇನ್ನಿತರರು ಹಾಜರಿದ್ದರು.

ಗಣೇಶ್ ಪ್ರಾರ್ಥಿಸಿದರು. ಟಿ. ಸುರೇಶ್ ಸ್ವಾಗತಿಸಿದರು. ಗುರುಪಾದ ಗೌಡ ವಂದಿಸಿದರು. ಜಿ.ಬಿ. ವಸಂತಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.