ADVERTISEMENT

ಜೈವಿಕ ಇಂಧನ: ಗ್ರಾಮೀಣ ಜನರಲ್ಲಿ ಅರಿವು ಅಗತ್ಯ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 11:00 IST
Last Updated 1 ಅಕ್ಟೋಬರ್ 2011, 11:00 IST

ಸೊರಬ: ಜೈವಿಕ ಇಂಧನದ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಗಿಡ ನೆಡುವುದರೊಂದಿಗೆ ಜನ, ಜಾನುವಾರು ಹಾಗೂ ಬೆಂಕಿಯಿಂದ ಅವುಗಳನ್ನು ರಕ್ಷಿಸಿ ಕಾಪಾಡುವುದು ಸಹಮುಖ್ಯ ಎಂದು ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಎಚ್.ಬಿ. ಗಂಗಾಧರಪ್ಪ ಹೇಳಿದರು.

ಶುಕ್ರವಾರ ಪಟ್ಟಣದಲ್ಲಿ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಸಾಗರದ ಶೆಡ್ತಿಕೆರೆಯ ಗ್ರಾಮಾಂತರ ಸಮುದಾಯ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ಏರ್ಪಡಿಸಿದ್ದ ಜೈವಿಕ ಇಂಧನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಇಂಧನಯುಕ್ತ ಹೊಂಗೆ, ಬೇವು, ಜತ್ರೋಪಾ, ಸೀಮಾರೂಬ, ಹಿಪ್ಪೆ ಮೊದಲಾದ ಎಥೆನಾಲ್ ಉತ್ಪಾದಕಗಳ ನೆಡುವಿಕೆ, ಬೀಜ ಸಂಗ್ರಹಣೆ, ಮಾರುಕಟ್ಟೆ ಜಾಲ ನಿರ್ಮಾಣ, ಬರಡು ಬಂಗಾರ ಹಾಗೂ ಹಸಿರು ಹೊನ್ನು ಕಾರ್ಯಕ್ರಮಗಳ ಕುರಿತು ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಯಿತು.

ಎಸಿಎಫ್ ಚಂದ್ರಶೇಖರ್, ವಿಜ್ಞಾನ ಕೇಂದ್ರದ ಅಧ್ಯಕ್ಷ ಸಿ.ಎ. ರಾಜಶೇಖರ್, ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಡಿ.ಎಸ್. ರವಿಶಂಕರ್, ಪರಿಸರವಾದಿ ಶ್ರೀಪಾದ್ ಬಿಚ್ಚುಗತ್ತಿ ಉಪನ್ಯಾಸ ನೀಡಿದರು.
ತಾಲ್ಲೂಕು ಪಂಚಾಯ್ತಿಅಧ್ಯಕ್ಷೆ ಮೀನಾಕ್ಷಮ್ಮ ಅಧ್ಯಕ್ಷತೆ ವಹಿಸಿದ್ದರು.

ಉಪಾಧ್ಯಕ್ಷೆ ಆರ್.ಕೆ. ಹೇಮಾವತಿ, ಇಒ ಪುಷ್ಪಾ ಎಂ. ಕಮ್ಮಾರ್, ತಹಶೀಲ್ದಾರ್ ಶ್ರೀಧರಮೂರ್ತಿ ಪಂಡಿತ್ ಉಪಸ್ಥಿತರಿದ್ದರು. ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಪಿಡಿಒ, ಕಾರ್ಯದರ್ಶಿ, ಅರಣ್ಯ ಸಮಿತಿ, ಜಲಾನಯನ ಮಂಡಳಿ ಸದಸ್ಯರು ಕಾರ್ಯಾಗಾರದ ಪ್ರಯೋಜನ ಪಡೆದರು. ವಿಜ್ಞಾನ ಕೇಂದ್ರದ ಆನೆಗುಳಿ ಸುಬ್ರಾವ್ ಪ್ರಾಸ್ತಾವಿಕ ಮಾತನಾಡಿದರು.

ವೆಂಕಟೇಶ್ ಸ್ವಾಗತಿಸಿದರು. ಪೂರ್ಣಪ್ರಜ್ಞ ವಂದಿಸಿದರು. ಗಣಪತಿ ಹಣೆಗೆರೆ ಕಾರ್ಯಕ್ರಮ ನಿರೂಪಿಸಿದರು.
ಪಾಲಿಟೆಕ್ನಿಕ್ ಮೂಲಕ ಸಮುದಾಯ ಅಭಿವೃದ್ಧಿ ಯೋಜನೆ, ವಿಶ್ವಭಾರತಿ ಟ್ರಸ್ಟ್ ಹಾಗೂ ಮಾನಸ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ಸಹಕಾರ ನೀಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.