ADVERTISEMENT

ಪದವಿ ಕಾಲೇಜಿನಲ್ಲಿ ಹಸಿರೀಕರಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 9:35 IST
Last Updated 17 ಜುಲೈ 2013, 9:35 IST

ರಿಪ್ಪನ್‌ಪೇಟೆ: ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಸೋಮವಾರ ವಲಯ ಅರಣ್ಯಾಧಿಕಾರಿ ಬಿ.ಎ. ರವೀಂದ್ರ ಅವರು ಹಸಿರೀಕರಣಕ್ಕೆ ಚಾಲನೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಕ್ರಿಟ್ ನಾಡಿನ ಮೇಲುಗೈ  ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದರಿಂದ ಜನ ಜೀವನ ಹದಗೆಡುತ್ತಿರುವುದರಿಂದ  ಪ್ರತಿ ಯೊಬ್ಬರು ಪರಿಸರ ಪ್ರಜ್ಞೆಯನ್ನು ಬೆಳಸಿಕೊಳ್ಳುವುದರ ಮೂಲಕ ಸಸ್ಯ ಸಂಪತ್ತನ್ನು ಹೆಚ್ಚಿಸಬೇಕು  ಎಂದರು.

ಈಗಾಗಲೇ ರೈತರ ಬರಡು ಭೂಮಿ ಹಾಗೂ ಖಾತೆ ಜಾಗದಲ್ಲಿ ಅರಣ್ಯ ಗಿಡ ಬೆಳೆಸಲು ಇಲಾಖೆ ವತಿಯಿಂದ ಉತ್ತೇಜನ ನೀಡಲಾಗುತ್ತಿದೆ. ಅಲ್ಲದೆ ಸರ್ಕಾರದಿಂದ ಅದರ ರಕ್ಷಣೆಗೆ ಪ್ರೋತ್ಸಾಹ ಧನವನ್ನೂ ಸಹ ನೀಡಲಾಗುವುದು ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ವೈ.ಕುಬೇರಪ್ಪ, ಉಪನ್ಯಾಸಕ ಜಯಶೀಲ , ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.