ADVERTISEMENT

ಮುತೈದೆಯರಿಂದ ಹೊರಬೀಡು ಆಚರಣೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 10:16 IST
Last Updated 2 ಜನವರಿ 2014, 10:16 IST

ಸೊರಬ: ತಾಲ್ಲೂಕಿನ ಹಿರೇಶಕುನ ಗ್ರಾಮದಲ್ಲಿ ಫೆ. 4ರಿಂದ 12ರ ವರೆಗೆ ನಡೆಯುವ ದುರ್ಗಾಂಬಾ ಹಾಗೂ ಮಾರಿಕಾಂಬಾ ಜಾತ್ರೆ ಪ್ರಯುಕ್ತ ಜಾತ್ರಾ ಸಮಿತಿ ವತಿಯಿಂದ ಮುತೈದೆಯರಿಂದ ಈಚೆಗೆ ಹೊರಬೀಡು ಆಚರಣೆ ನಡೆಯಿತು.

ಹಿಂದಿನವರ ನಡೆಸಿಕೊಂಡ ಬಂದ  ಸಂಪ್ರದಾಯದಂತೆ ಜಾತ್ರಾ ಮಹೋತ್ಸವಕ್ಕೂ ಮೊದಲು ಪಟ್ಟಣದ ಮತ್ತು ಹಿರೇಶಕುನ ಗ್ರಾಮದ ಹಿರಿಯರು ಹಾಗೂ ಮಹಿಳೆಯರ ಸಮ್ಮುಖದಲ್ಲಿ ನಡೆದ ಹೊರಬೀಡು (ಎಡೆ ಜಾತ್ರೆ) ಆಚರಣೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡು ದುರ್ಗಾಂಬ ಮತ್ತು ಮಾರಿಕಾಂಬ ದೇವಿಗೆ ಪೂಜೆ ಸಲ್ಲಿಸಿದ ನಂತರ ಪಟ್ಟಣ ಪಂಚಾಯ್ತಿ ಮುಂಭಾಗದಲ್ಲಿ ಪಟಾಕಿ ಸಿಡಿಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ದೇವಿಯ ಪಲ್ಲಕ್ಕಿಯ ಮೆರವಣಿಗೆ ನಡೆಸಿದರು.

ನಂತರ ಹಿರೇಶಕುನ ಗ್ರಾಮದ ಗಡಿ ಪ್ರದೇಶವಾದ ಸದಾಶಿವ ಮಲ್ಲಪ್ಪ ದೇವಸ್ಥಾನ ಹತ್ತಿರ ಗಡಿ ಮಾರಮ್ಮನ ಪ್ರತಿಷ್ಠಾಪಿಸಿ, ವಿವಿಧ ಸಿಹಿ ಖಾದ್ಯವನ್ನು ದೇವಿಗೆ ಎಡೆ ಹಿಡಿಯಲಾಯಿತು. ಪೂಜಾ ಕೈಂಕರ್ಯಗಳು ನಡೆಸುವುದರ ಮೂಲಕ ಜಾತ್ರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಜಾತ್ರಾ ಸಮಿತಿ ಅಧ್ಯಕ್ಷ ಮಂಚಿ ಹನುಮಂತಪ್ಪ, ಉಪಾಧ್ಯಕ್ಷ ಎಂ.ಡಿ.ಶೇಖರ್, ಪ್ರಧಾನ ಕಾರ್ಯದರ್ಶಿ ಎಚ್. ಎಸ್.ದಾನಶೇಖರ, ಖಜಾಂಚಿ ಪ್ರಶಾಂತ ಮೇಸ್ತ್ರಿ, ಗ್ರಾಮ ಸಮಿತಿ ಅಧ್ಯಕ್ಷ ದೇವಪ್ಪ, ಸದಸ್ಯರಾದ ಸಣ್ ಬೈಲ್ ಪರುಶುರಾಮಪ್ಪ, ರಘು ಭಂಡಾರಿ, ಮಂಚಿ ಸೋಮಪ್ಪ, ಎ,ವಿ.ಮಾರುತಿ, ಮಹಾದೇವಪ್ಪ, ಮಂಚಿ ಜಾಕ್ಷಪ್ಪ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.