ADVERTISEMENT

ರಾಜ್ಯದಲ್ಲಿಯೇ ವಿಸ್ತಾರ ಕ್ಷೇತ್ರ ಎಂಬ ಹೆಗ್ಗಳಿಕೆ

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ವಿಶೇಷ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 10:01 IST
Last Updated 6 ಏಪ್ರಿಲ್ 2013, 10:01 IST

ತೀರ್ಥಹಳ್ಳಿ: ಸಮಾಜವಾದಿ ಚಳವಳಿಗೆ ತಳಹದಿಯಾದ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ 2008ರಲ್ಲಿ ಪುನರ್ ವಿಂಗಡಣೆಯಿಂದಾಗಿ ಹೊಸನಗರ ತಾಲ್ಲೂಕಿನ  ಹುಂಚ, ನಗರ ಹಾಗೂ ಶಿವಮೊಗ್ಗ ತಾಲ್ಲೂಕಿನ ನಿಧಿಗೆ ಹೋಬಳಿಯನ್ನು ಒಳಗೊಂಡಿದೆ. ರಾಜ್ಯದಲ್ಲಿಯೇ ಅತೀ ಹೆಚ್ಚು ವಿಸ್ತಾರ ಪ್ರದೇಶದ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕ್ಷೇತ್ರ ವಿಂಗಡಣೆಗೂ ಮುಂಚೆ ನಗರ ಹೋಬಳಿ ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರಕ್ಕೂ, ಹುಂಚ ಹೋಬಳಿ  ಹೊಸನಗರ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿತ್ತು. ಶಿವಮೊಗ್ಗ ತಾಲ್ಲೂಕಿನ ನಿಧಿಗೆ ಹೋಬಳಿ  ಶಿವಮೊಗ್ಗ ವಿಧಾನ ಸಭಾ  ಕ್ಷೇತ್ರಕ್ಕೆ ಸೇರಿತ್ತು.

2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಸಂದರ್ಭದಲ್ಲಿ ಹೊಸನಗರ ಕ್ಷೇತ್ರವನ್ನು ಒಡೆದು ಸಾಗರ, ಶಿವಮೊಗ್ಗ ಗ್ರಾಮಾಂತರ ಹಾಗೂ ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರಕ್ಕೆ ಸೇರಿಸಲಾಗಿದೆ.

ಕಾಂಗ್ರೆಸ್‌ಗೆ ಮನ್ನಣೆ ನೀಡಿದ ಹೊಸನಗರ ಕ್ಷೇತ್ರದಲ್ಲಿ ಶೀರ‌್ನಾಳಿ ಚಂದ್ರಶೇಖರ್, ಬಿ. ಸ್ವಾಮಿರಾವ್ ಎರಡು ಬಾರಿ, ಜಿ.ಡಿ. ನಾರಾಯಣಪ್ಪ ಒಂದು ಬಾರಿ ಆರಿಸಿ ಬಂದಿದ್ದರು. ಬಿಜೆಪಿಯಿಂದ ಆಯನೂರು ಮಂಜುನಾಥ್ ಒಂದು ಬಾರಿ ಗೆಲುವು ಸಾಧಿಸಿದ್ದರು.

ಐದು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಡಿದಾಳ್ ಮಂಜಪ್ಪ, ಎ.ಆರ್. ಬದರಿನಾರಾಯಣ್, ಕಡಿದಾಳ್ ದಿವಾಕರ್, ಪಟಮಕ್ಕಿ ರತ್ನಾಕರ್, ಕಿಮ್ಮನೆ ರತ್ನಾಕರ್  ಒಂದು ಬಾರಿ ಆಯ್ಕೆಯಾಗಿದ್ದಾರೆ.

ಸಂಯುಕ್ತ ಸೋಷಲಿಸ್ಟ್ ಪಾರ್ಟಿಯಿಂದ ಎರಡು ಬಾರಿ ಶಾಂತವೇರಿ ಗೋಪಾಲಗೌಡ, ಸೋಷಲಿಸ್ಟ್ ಪಾರ್ಟಿಯಿಂದ ಕೋಣಂದೂರು ಲಿಂಗಪ್ಪ ಒಂದು ಬಾರಿ ಆಯ್ಕೆಯಾಗಿದ್ದರು. ಜನತಾ ದಳದಿಂದ ಡಿ.ಬಿ. ಚಂದ್ರೇಗೌಡ ಒಂದು ಸಲ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಆರಗ ಜ್ಞಾನೇಂದ್ರ ಬಿಜೆಪಿಯಿಂದ ನಿರಂತರ ಮೂರು ಬಾರಿ ಗೆಲುವು ಸಾಧಿಸಿದ್ದರು.ಪ್ರಸ್ತತ ಶಾಸಕ ಸ್ಥಾನದಲ್ಲಿ ಕಾಂಗ್ರೆಸ್‌ನ ಕಿಮ್ಮನೆ ರತ್ನಾಕರ್ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.