ADVERTISEMENT

ಲಿಂಗನಮಕ್ಕಿಗೆ ನೀರಿನ ಒಳಹರಿವು ಇಳಿಕೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2011, 8:00 IST
Last Updated 11 ಸೆಪ್ಟೆಂಬರ್ 2011, 8:00 IST

ಕಾರ್ಗಲ್: ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಸುರಿಯುತ್ತಿದ್ದ ಮಳೆ ನಿಂತು ಅಣೆಕಟ್ಟೆಗೆ ಬರುತ್ತಿದ್ದ ಒಳಹರಿವು ಇಳಿಕೆಯಾಗಿದೆ.

 ಜಲಾಶಯದ ಎಲ್ಲಾ ರೇಡಿಯಲ್ ಗೇಟ್‌ಗಳನ್ನ ಮುಚ್ಚಿದ್ದು, ಶನಿವಾರ 1816.6 ಅಡಿ ಅಣೆಕಟ್ಟೆಯಲ್ಲಿ ಸಂಗ್ರಹವಾಗಿದೆ ಎಂದು ಜಲಾಶಯ ವಿಭಾಗದ ಮುಖ್ಯ ಎಂಜಿನಿಯರ್ ರಾಜಮುಡಿ ತಿಳಿಸಿದ್ದಾರೆ. 

 ಒಳಹರಿವು 13,000 ಕ್ಯೂಸೆಕ್ ಇದ್ದು, ಲಿಂಗನಮಕ್ಕಿ ವಿದ್ಯುದಾಗಾರ ಮತ್ತು ಶರಾವತಿ ವಿದ್ಯುದಾಗಾರಕ್ಕೆ ಪೂರ್ಣ ಪ್ರಮಾಣದ ಬೇಡಿಕೆಗನುಗುಣವಾಗಿ ನೀರು ಪೂರೈಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.