ADVERTISEMENT

ವರುಣ ಪ್ರಕೋಪ; ಬೆಳೆ ಹಾನಿ

ಮಳೆ ಆರ್ಭಟ: ಜಮೀನಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 5:20 IST
Last Updated 4 ಸೆಪ್ಟೆಂಬರ್ 2013, 5:20 IST
ರಿಪ್ಪನ್‌ಪೇಟೆ ಸಮೀಪದ ಬೆಳ್ಳೂರು ಗ್ರಾಮದ ಬಂಗ್ಲೆದಿಂಬದ ಶಂಕರ ಹಳ್ಳದ ದಂಡೆ ಒಡೆದ ಪರಿಣಾಮ ರಸ್ತೆ ಕೊಚ್ಚಿಹೋಗಿರುವ ದೃಶ್ಯ.
ರಿಪ್ಪನ್‌ಪೇಟೆ ಸಮೀಪದ ಬೆಳ್ಳೂರು ಗ್ರಾಮದ ಬಂಗ್ಲೆದಿಂಬದ ಶಂಕರ ಹಳ್ಳದ ದಂಡೆ ಒಡೆದ ಪರಿಣಾಮ ರಸ್ತೆ ಕೊಚ್ಚಿಹೋಗಿರುವ ದೃಶ್ಯ.   

ರಿಪ್ಪನ್‌ಪೇಟೆ: ಬೆಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನ ದಿಢೀರ್ ಸುರಿದ ಭಾರಿ ಮಳೆಯಿಂದ ಹಳ್ಳ ಕೊಳ್ಳಗಳ ಕಟ್ಟೆ ಒಡೆದು ನೂರಾರು ಎಕರೆ ನಾಟಿ ಮಾಡಿದ ಭತ್ತದ ಗದ್ದೆ  ಹಾಗೂ ಶುಂಠಿ, ಅಡಿಕೆ ಬೆಳೆಗಳಿಗೆ ಹಾನಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

ಕಳಸೆ -ನೆರ್ಲಿಗೆ ಗ್ರಾಮದಲ್ಲಿ ಹಳ್ಳದ ಒಡ್ಡು ಒಡೆದು  ಸುಮಾರು 60ಕ್ಕೂ ಅಧಿಕ ಎಕರೆ ಭತ್ತದ ಬೆಳೆ, ಶುಂಠಿ ಬೆಳೆ ಮತ್ತು  ಬಸವಾಪುರ, ಕೂಳವಂಕ ಕಂಬತ್ತಮನೆ, ಕೊರ್ಲಹಕ್ಲು, ಅಡ್ಡೇರಿ ಗ್ರಾಮದ ತಗ್ಗು ಪ್ರದೇಶದ ಜಮೀನುಗಳಿಗೆ  ನೀರು ನುಗ್ಗಿದೆ  
ಮಳೆಯಿಂದಾಗಿ ಕೆಲವೆಡೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಆದ್ದರಿಂದ  ರಾತ್ರಿಯಿಡಿ ಕಗ್ಗತ್ತಲಿನಲ್ಲಿ ಗ್ರಾಮಸ್ಥರು ಕಾಲ ಕಳೆಯುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.