ಸೊರಬ: ಸ್ವಂತ ಉದ್ಯೋಗ ಆರ್ಥಿಕ ಗುಣಮಟ್ಟ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿರುದ್ಯೋಗ ಸಮಸ್ಯೆಯನ್ನು ದೂರ ಮಾಡುತ್ತದೆ ಎಂದು ಪ.ಪಂ. ಅಧ್ಯಕ್ಷೆ ವಿಜಯಾ ಮಹಾಲಿಂಗಪ್ಪ ನುಡಿದರು.ಸೋಮವಾರ ಪಟ್ಟಣದ ಕಾನಕೇರಿ ಬಡಾವಣೆಯಲ್ಲಿ ಪಾಲಿಟೆಕ್ನಿಕ್ ಮೂಲಕ ಸಮುದಾಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ನಿಟ್ಟಿಂಗ್ ಮತ್ತು ಎಂಬ್ರಾಯ್ಡರಿ ಹಾಗೂ ಬ್ಯಾಗ್ ತಯಾರಿಕೆ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.
ಗ್ರಾಮೀಣ ಜನರ ಜೀವನಮಟ್ಟ ಉತ್ತಮ ಪಡಿಸಲು ವಿವಿಧ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಿದ್ದು, ಯೋಜನೆ ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಶ್ಲಾಘಿಸಿದರು.ಉಪಾಧ್ಯಕ್ಷ ಪ್ರಶಾಂತ್ ಮೇಸ್ತ್ರಿ, ಸದಸ್ಯ ಮಹೇಶ್‌ಗೌಳಿ, ಮುಖ್ಯಾಧಿಕಾರಿ ನರಸಿಂಹಮೂರ್ತಿ ಉಪಸ್ಥಿತರಿದ್ದರು.
ಸರ್ಕಾರಿ ಪಾಲಿಟೆಕ್ನಿಕ್‌ನ ಕಂಪ್ಯೂಟರ್ ವಿಭಾಗದ ಉಪನ್ಯಾಸಕ ಎನ್.ಜಿ. ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು.ಯೋಜನೆಯ ಸಲಹೆಗಾರ ಉಮೇಶ್ ಪ್ರಾಸ್ತಾವಿಕ ಮಾತನಾಡಿದರು.ಯೋಜನೆಯ ಅಂಕಿ-ಅಂಶ ಸಹಾಯಕ ಸಂತೋಷ್, ತರಬೇತಿದಾರ ಶಿಕ್ಷಕಿ ಇರ್ವಿನ್ ಡಿಸೋಜಾ 40ಕ್ಕೂ ಹೆಚ್ಚು ಶಿಬಿರಾರ್ಥಿಗಳು ಹಾಜರಿದ್ದರು.
ಪೂರ್ಣಿಮಾ ಮಧು, ಅಂಜುಂಬಾನು, ಸುನಿತಾ, ರುಕ್ಮಿಣಿ, ಆಫ್ರೀನ್, ಆಯೇಷಾ, ಉಷಾಕಿರಣ ಅನಿಸಿಕೆ ವ್ಯಕ್ತಪಡಿಸಿದರು. ಹೊಲಿಗೆ ತರಬೇತಿಯ ಸೌಲಭ್ಯವನ್ನು ಒದಗಿಸಿಕೊಡಲು ಮನವಿ ಮಾಡಿದರು. ಸಮಾರಂಭದ ಅಂಗವಾಗಿ ರಂಗವಲ್ಲಿ ಸ್ಪರ್ಧೆ ಎರ್ಪಡಿಸಲಾಗಿತ್ತು. ಪ್ರೀತಿ ಸ್ವಾಗತಿಸಿದರು. ಸೌಮ್ಯಾ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.