ADVERTISEMENT

26 ಮಂದಿಗೆ ಕೊರೊನಾ: 31 ಜನ ಗುಣಮುಖ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 5:18 IST
Last Updated 11 ಏಪ್ರಿಲ್ 2021, 5:18 IST

ಶಿವಮೊಗ್ಗ: ಜಿಲ್ಲೆಯಲ್ಲಿ ಶನಿವಾರ ಸೋಂಕಿತರಿಗಿಂತ ಗುಣಮುಖರಾದವರೇ ಹೆಚ್ಚಿದ್ದಾರೆ.31 ಜನ ಗುಣಮುಖರಾಗಿದ್ದು, 26 ಮಂದಿಗೆ ಕೊರೊನಾ ಸೋಂಕು ತಗುಲಿದೆ.

2,413 ಜನರ ಗಂಟಲು ದ್ರವಗಳನ್ನು ಪರೀಕ್ಷೆ ಮಾಡಲಾಗಿದೆ. ಹಿಂದಿನ ದಿನಗಳ ಪರೀಕ್ಷಾ ವರದಿಯೂ ಸೇರಿ 2,333 ಮಂದಿಯ ವರದಿ ನೆಗೆಟಿವ್ ಬಂದಿದೆ.

ಮನೆಯಲ್ಲಿ 240 ಮಂದಿ ಸೇರಿ ಒಟ್ಟು 376 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್‌ನಿಂದ 349 ಜನ ಮೃತಪಟ್ಟಿದ್ದಾರೆ.

ADVERTISEMENT

ಶಿವಮೊಗ್ಗ ತಾಲ್ಲೂಕಿನಲ್ಲಿ 5, ತೀರ್ಥಹಳ್ಳಿಯಲ್ಲಿ 7, ಸೊರಬದಲ್ಲಿ 1, ಹೊಸನಗರದಲ್ಲಿ 7 ಹಾಗೂ ಇಲ್ಲಿಗೆ ಬಂದಿದ್ದ ಹೊರ ಜಿಲ್ಲೆಯ 6 ಜನರಿಗೆ ಕೊರೊನಾ ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.