ಆನವಟ್ಟಿ: ಬಾಲಿಕಾ ಪ್ರೌಢಶಾಲೆ ಆಂಗ್ಲ ಮಾಧ್ಯಮ ಶೇ 100ರ ಸಾಧನೆ
ಆನವಟ್ಟಿ: ಇಲ್ಲಿನ ಸರ್ಕಾರಿ ಬಾಲಿಕಾ ಪ್ರೌಢ ಶಾಲೆಯು ಆಂಗ್ಲ ಮಾಧ್ಯಮದಲ್ಲಿ ಶೇ 100ರ ಸಾಧನೆ ಮಾಡಿದೆ.
ಪರೀಕ್ಷೆ ಬರೆದ 57 ವಿದ್ಯಾರ್ಥಿನಿಯರು ಉತ್ತೀರ್ಣವಾಗಿದ್ದಾರೆ. ಕನ್ನಡ ಮಾಧ್ಯಮದಲ್ಲಿ 80 ವಿದ್ಯಾರ್ಥಿನಿಯರು ಪರೀಕ್ಷೆಗೆ ಬರೆದಿದ್ದು, 61 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಶಾಲೆಯ ಒಟ್ಟು ಫಲಿತಾಂಶ ಶೇ 86.13 ಆಗಿದೆ.
ಆಂಗ್ಲ ಮಾಧ್ಯಮದಲ್ಲಿ ಚಂದನಾ ಕೆ.ಎಂ. 620 ಅಂಕ, ಸಂಜನಾ ಬಿ.ಎಸ್. 616, ರೋಹಿಣಿ ಆರ್. 614, ಸಾನ್ವಿಕಾ ಎಸ್.ಎಸ್. 613, ಚಂದನಾ ಎಂ. 609, ಚೇತನಾ ಬಿ.ಎಚ್. 600, ಕನ್ನಡ ಮಾಧ್ಯಮದಲ್ಲಿ ಸುಶ್ಮಿತಾ ಎಸ್. 608, ಇಂಚರಾ ಜೆ.ಎನ್. 603 ಅಂಕ ಪಡೆಯುವ ಮೂಲಕ ಶಾಲೆಯ ಕೀರ್ತೀ ಹೆಚ್ಚಿಸಿದ್ದಾರೆ.
ಉನ್ನತ ಶ್ರೇಣಿಯಲ್ಲಿ 27, ಪ್ರಥಮ ದರ್ಜೆ 72, ದ್ವಿತೀಯ ದರ್ಜೆ 17 ವಿದ್ಯಾರ್ಥಿನಿಯರು ಪಡೆದುಕೊಂಡಿದ್ದು, ಇವರ ಸಾಧನೆಗೆ ಮುಖ್ಯ ಶಿಕ್ಷಕ ವೀರಭದ್ರಪ್ಪ, ಸಹ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಪೋಷಕರು ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.