ADVERTISEMENT

40 ಸಾವಿರ ಎಕರೆ ಕಾನು ಅರಣ್ಯ ಸಂರಕ್ಷಣೆ

ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾಹಿತಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 14:58 IST
Last Updated 10 ಆಗಸ್ಟ್ 2020, 14:58 IST
ಶಿವಮೊಗ್ಗದಲ್ಲಿ ಸೋಮವಾರ ‘ಜಿಲ್ಲೆಯ ಕಾನು ಅರಣ್ಯಗಳು’ ಕಿರುಹೊತ್ತಿಗೆಯನ್ನು ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಮಾತನಾಡಿದರು.
ಶಿವಮೊಗ್ಗದಲ್ಲಿ ಸೋಮವಾರ ‘ಜಿಲ್ಲೆಯ ಕಾನು ಅರಣ್ಯಗಳು’ ಕಿರುಹೊತ್ತಿಗೆಯನ್ನು ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಮಾತನಾಡಿದರು.   

ಶಿವಮೊಗ್ಗ:ಕಾನು ಅರಣ್ಯ ಸಂರಕ್ಷಣಾ ಯೋಜನೆ ಜಾರಿಗೊಳಿಸಿದ ದಶಕದ ಬಳಿಕ ಜಿಲ್ಲೆಯ 40 ಸಾವಿರ ಎಕರೆಪ್ರದೇಶದಸಂರಕ್ಷಣೆ ಸಾಧ್ಯವಾಗಿದೆ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ‘ಜಿಲ್ಲೆಯ ಕಾನು ಅರಣ್ಯಗಳು’ಕಿರುಹೊತ್ತಿಗೆ ಬಿಡುಗಡೆಮಾಡಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸುಮಾರು 2 ಲಕ್ಷ ಎಕರೆ ಇದ್ದಕಾನು ಅರಣ್ಯ ಪ್ರದೇಶಈಗ 1.40 ಲಕ್ಷ ಎಕರೆಗೆಇಳಿದಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಇನ್ನೂ 70 ಲಕ್ಷ ಎಕರೆ ಸಂರಕ್ಷಿಸುವ ಗುರಿ ಇಟ್ಟುಕೊಂಡುಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ. ಈ ಕುರಿತು ಪರಿಶೀಲಿಸಲು ಭಾರತೀಯ ವಿಜ್ಞಾನ ಸಂಸ್ಥೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಕ್ರಿಯಾ ಯೋಜನೆ ಸಿದ್ಧಪಡಿಸಿದ ನಂತರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ADVERTISEMENT

ಪರಿಭಾವಿತ ಅರಣ್ಯ ಸಂರಕ್ಷಣೆಗೆ ಶಿಫಾರಸು:ಜಿಲ್ಲೆಯಲ್ಲಿ ಅತಿ ಹೆಚ್ಚು ಪರಿಭಾವಿತ ಅರಣ್ಯಭೂಮಿ ಇದೆ (ಕಂದಾಯ). ಅಂತಹ ಭೂಮಿಬಹುತೇಕ ಕಾನು ಅರಣ್ಯವಾಗಿದೆ. ಪ್ರತಿ ಗ್ರಾಮದ ಕಾನು ಅರಣ್ಯಗಳನ್ನೂಕಂದಾಯ ಇಲಾಖೆ, ಅರಣ್ಯ ಇಲಾಖೆ ಜಂಟಿ ಸಮೀಕ್ಷೆ ನಡೆಸಬೇಕು.ಜಿಪಿಎಸ್ ಮೂಲಕ ಗಡಿ ಗುರುತಿಸಿ, ನಕ್ಷೆ ರಚಿಸಬೇಕು. ಜಲಾನಯನ ಅಭಿವೃದ್ಧಿ ಯೋಜನೆಗಳಲ್ಲಿ ಕಾನು ಅರಣ್ಯ ಸಂರಕ್ಷಣೆಯನ್ನೂಸೇರಿಸಬೇಕು. ಈ ವ್ಯಾಪ್ತಿಯಲ್ಲಿ ಕಿರು ಅರಣ್ಯ ಉತ್ಪತ್ತಿ ಸಂಗ್ರಹಕ್ಕೆ ಕಡಿವಾಣ ಹಾಕಬೇಕುಎಂಬಶಿಫಾರಸುಗಳನ್ನು ವರದಿಯಲ್ಲಿ ಸೇರಿಸಲಾಗುವುದು ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಮಾತನಾಡಿ, ಕಾನು ಅರಣ್ಯವನ್ನು ಯಾವುದೇ ಉದ್ದೇಶಕ್ಕೆ ಮಂಜೂರು ಮಾಡುತ್ತಿಲ್ಲ.ಈಗಾಗಲೇ43 ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಲಾಗಿದೆ. ಅವರುಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಈಗಾಗಲೇ ಅನಧಿಕೃತವಾಗಿ ಮಂಜೂರು ಮಾಡಲಾಗಿರುವ ಕಂದಾಯ ಅರಣ್ಯ ಭೂಮಿಯನ್ನು ಮರುಪರಿಶೀಲಿಸಿ, ಪ್ರಸ್ತಾವ ಸಲ್ಲಿಸುವಂತೆ ಉಪ ವಿಭಾಗಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದರು.

ಸಾಗರ ವಿಭಾಗಉಪ ಅರಣ್ಯ ಸಂರಕ್ಷಣಾಧಿಕಾರಿಮೋಹನ್ ಕುಮಾರ್, ಸಾಗರ ವಿಭಾಗದಲ್ಲಿ 210 ಕಾನು ಪ್ರದೇಶಗಳಿವೆ. ಈ ವ್ಯಾಪ್ತಿಯಲ್ಲಿ 370 ಕಿ.ಮೀ. ಕಂದಕ ತೋಡಿ ಗಡಿ ಗುರುತಿಸಲಾಗಿದೆ. ಎಲ್ಲ ಕಾನುಗಳನ್ನೂಅಭಿವೃದ್ಧಿಪಡಿಸಲಾಗಿದೆ. 62 ಕಾನು ಪ್ರದೇಶದ 124 ಕಿ.ಮೀ ವ್ಯಾಪ್ತಿಯಲ್ಲಿ ಕಂದಕ ನಿರ್ಮಿಸಿ, ನಾಮಫಲಕ ಹಾಕುವ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಹೆಚ್ಚುವರಿಜಿಲ್ಲಾಧಿಕಾರಿ ಜಿ.ಅನುರಾಧಾ, ಶಿವಮೊಗ್ಗ ವಿಭಾಗಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರ್, ಪರಿಸರ ತಜ್ಞ ಪ್ರೊ.ಕುಮಾರಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.