ADVERTISEMENT

ಎಂಪಿಎಂ ನೆಡುತೋಪು ಅರಣ್ಯ ಇಲಾಖೆಗೆ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಜನವರಿ 2019, 14:46 IST
Last Updated 3 ಜನವರಿ 2019, 14:46 IST
ಶಿವಮೊಗ್ಗದಲ್ಲಿ ಗುರುವಾರ ವೃಕ್ಷಲಕ್ಷ ಆಂದೋಲನದ ಸದಸ್ಯರು ಎಂಪಿಎಂ ನೆಡುತೋಪು ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಶಿವಮೊಗ್ಗದಲ್ಲಿ ಗುರುವಾರ ವೃಕ್ಷಲಕ್ಷ ಆಂದೋಲನದ ಸದಸ್ಯರು ಎಂಪಿಎಂ ನೆಡುತೋಪು ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.   

ಶಿವಮೊಗ್ಗ: 70 ಸಾವಿರ ಎಕರೆ ಎಂಪಿಎಂ ನೆಡುತೋಪು ಪ್ರದೇಶವನ್ನು ಅರಣ್ಯ ಇಲಾಖೆವಶಕ್ಕೆ ನೀಡಬೇಕು ಎಂದು ಒತ್ತಾಯಿಸಿ ಪಶ್ಚಿಮಘಟ್ಟದ ಪರಿಸರ ಸಂಘಟನೆ ಸದಸ್ಯರುಗುರುವಾರಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಭದ್ರಾವತಿ ಎಂಪಿಎಂ ಕಾರ್ಖಾನೆಬಾಗಿಲು ಮುಚ್ಚಿದೆ. ಹಿಂದೆ ಕಾರ್ಖಾನೆಗೆ ಕಚ್ಚಾ ಸಾಮಗ್ರಿ ಪೂರೈಸಲುಜಿಲ್ಲೆಯ 525 ಸ್ಥಳಗಳಲ್ಲಿ70ಸಾವಿರ ಎಕರೆ ನೆಡುತೋಪು ನೀಡಲಾಗಿತ್ತು. ಈಗ ಎಪಿಎಂ ಬಂದ್‌ ಆಗಿರುವ ಪರಿಣಾಮ ಭೂಮಿ ಅತಂತ್ರವಾಗಿದೆ. ಖಾಸಗಿವ್ಯಕ್ತಿಗಳು, ಪಟ್ಟಭದ್ರರು ನೆಡುತೋಪು ಅತಿಕ್ರಮಣ ಮಾಡುತ್ತಿದ್ದಾರೆ. ಎಂಪಿಎಂ ಅರಣ್ಯ ವಿಭಾಗದಲ್ಲಿದ್ದ ಅರಣ್ಯ ಅಧಿಕಾರಿಗಳು, ಸಿಬ್ಬಂದಿಯನ್ನು ಬೇರೆ ಕಡೆ ನಿಯೋಜಿಸಲಾಗಿದೆ.ನೆಡುತೋಪುಗಳಿಗೆರಕ್ಷಣೆ ಇಲ್ಲ. ನೆಡುತೋಪಿನಲ್ಲಿ ಇರುವ ಲಕ್ಷಾಂತರ ಮರಗಳ ಲೂಟಿಯಾಗುತ್ತಿದೆ.ಈ ಕುರಿತು ವೃಕ್ಷಲಕ್ಷ ಆಂದೋಲನ ಕಳೆದ 3 ವರ್ಷಗಳಿಂದ ನೆಡುತೋಪುಗಳ ಸಂರಕ್ಷಣೆಗೆ ಒತ್ತಾಯ ಮಾಡುತ್ತಿದ್ದರೂ ಸರ್ಕಾರ ಯಾವುದೇ ನಿರ್ಣಯ ಕೈಗೊಂಡಿಲ್ಲ ಎಂದು ದೂರಿದರು.

ಎಂಪಿಎಂಅರಣ್ಯ ಇಲಾಖೆ ಜತೆ ಮಾಡಿಕೊಂಡ ಗುತ್ತಿಗೆ ಷರತ್ತುಗಳ ಉಲ್ಲಂಘನೆಯಾಗಿದೆ. ಈ ಭೂಮಿ ವಾಪಸ್ ಪಡೆಯಬೇಕು ಎಂದು ಜಿಲ್ಲಾ ಅರಣ್ಯ ಇಲಾಖೆ ಸರ್ಕಾರಕ್ಕೆ ವರದಿ ನೀಡಿದೆ. ಆದರೂಸರ್ಕಾರ ಕ್ರಮಜರುಗಿಸುತ್ತಿಲ್ಲ.ಏಕಜಾತಿ ನೆಡುತೋಪು ಬೆಳೆಸಲು ಖಾಸಗಿ ಉದ್ದಿಮೆದಾರರಿಗೆ ನೆಡುತೋಪು ಭೂಮಿ ನೀಡುವ ಹುನ್ನಾರು ನಡೆದಿದೆ ಎಂದು ಶಂಕೆ ವ್ಯಕ್ತಪಡಿಸಿದರು.

ADVERTISEMENT

ಸ್ವಾಭಾವಿಕ ಅರಣ್ಯ ಬೆಳೆಸಲು ಆಗ್ರಹ:ಜಿಲ್ಲೆಯಲ್ಲಿ ಒಂದು ಲಕ್ಷ ಎಕರೆ ಅರಣ್ಯ ಒತ್ತುವರಿ ಕಾರಣದಿಂದ ನಾಶವಾಗಿದೆ. ಎಂಪಿಎಂ ಗೆ ನೀಡಿದ್ದ 70 ಎಕರೆ ಭೂಮಿಯನ್ನು ಹಿಂದಕ್ಕೆ ಪಡೆದು ಅರಣ್ಯ ಅಭಿವೃದ್ಧಿ ಪಡಿಸಿದರೆ ಈಗಾಗಲೇ ಆಗಿರುವ ಅರಣ್ಯ ನಾಶಕ್ಕೆ ಬದಲಾಗಿ ಸ್ವಾಭಾವಿಕ ಅರಣ್ಯ ಬೆಳೆಲು ಸಾಧ್ಯವಾಗುತ್ತದೆ. ಎಂಪಿಎಂ ಅರಣ್ಯ ವಿಭಾಗದಲ್ಲಿರುವ ಅರಣ್ಯ ಅಧಿಕಾರಿಗಳು, ಸಿಬ್ಬಂದಿಯನ್ನುತ್ರಿಶಂಕು ಸ್ಥಿತಿಗೆ ದೂಡಬಾರದು. ಅರಣ್ಯ ಇಲಾಖೆಗೆ ನೆಡುತೋಪು ಕಾರ್ಮಿಕರನ್ನು ನಿಯೋಜನೆ ಮಾಡಬಾರದುಎಂದುಆಗ್ರಹಿಸಿದರು.

ಕಟಾವು ಮಾಡಿದನೂರಾರು ನೆಡುತೋಪುಗಳಲ್ಲಿ ಈಗಾಗಲೇ ಸ್ವಾಭಾವಿಕ ಗಿಡಮರಗಳು ಬೆಳೆದಿವೆ.ಸ್ವಲ್ಪ ರಕ್ಷಣೆ ನೀಡಿದರೂ ಸಾವಿರಾರು ಎಕರೆ ಅರಣ್ಯ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ. ಈ ಕುರಿತು ಸರ್ಕಾರ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದಿದ್ದರೆಕೋರ್ಟ್‌ಮೊರೆ ಹೋಗುವುದು ಅನಿವಾರ್ಯ ಎಂದು ಎಚ್ಚರಿಸಿದರು.

ನಂತರ ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದ್ರ ಅವರನ್ನು ವೃಕ್ಷಲಕ್ಷ ನಿಯೋಗ ಭೇಟಿ ಮಾಡಿ, ಚರ್ಚೆ ನಡೆಸಿತು.

ಪಶ್ಚಿಮಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಪರಿಸರತಜ್ಞ, ಪ್ರೊ.ಬಿ.ಎಂ. ಕುಮಾರಸ್ವಾಮಿ, ಲಕ್ಷ್ಮೀನಾರಾಯಣ ಕಾಶಿ, ಬಿ.ಎಚ್. ರಾಘವೇಂದ್ರಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.