ADVERTISEMENT

ಶಿವಮೊಗ್ಗ | ತಡೆಯಾಜ್ಞೆ ಇದ್ದರೂ ಪ್ರವಾಸೋದ್ಯಮ ಇಲಾಖೆಯಿಂದ ದೌರ್ಜನ್ಯ: ಆರೋಪ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2024, 13:54 IST
Last Updated 15 ಆಗಸ್ಟ್ 2024, 13:54 IST
ಕಾರ್ಗಲ್ ಸಮೀಪದ ಜೋಗ ಜಲಪಾತದ ರಾಣಿ ಫಾಲ್ಸ್ ನೆತ್ತಿಯ ಪ್ರದೇಶದಲ್ಲಿರುವ ವಾಸದ ಮನೆ 
ಕಾರ್ಗಲ್ ಸಮೀಪದ ಜೋಗ ಜಲಪಾತದ ರಾಣಿ ಫಾಲ್ಸ್ ನೆತ್ತಿಯ ಪ್ರದೇಶದಲ್ಲಿರುವ ವಾಸದ ಮನೆ    

ಸಾಗರ: ‘ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಜೋಗ ಜಲಪಾತದ ರಾಣಿ ಫಾಲ್ಸ್ ಸಮೀಪ ವಾಸವಿದ್ದ ನಮ್ಮ ಕುಟುಂಬವನ್ನು ಪ್ರವಾಸೋದ್ಯಮ ಇಲಾಖೆ ಒಕ್ಕಲೆಬ್ಬಿಸಲು ಮುಂದಾಗಿದ್ದು, ಈ ಮೂಲಕ ದೌರ್ಜನ್ಯ ನಡೆಯುತ್ತಿದೆ’ ಎಂದು ಜೋಗದ ನಿವಾಸಿ ಕ್ಯಾಫ್ತಿನಾ ಕೆ.ಫರ್ನಾಂಡಿಸ್ ಆರೋಪಿಸಿದ್ದಾರೆ.

‘ಏಳೆಂಟು ವರ್ಷಗಳಿಂದ ಜೋಗದಲ್ಲಿ ಮೂರು ಎಕರೆ ಪ್ರದೇಶದಲ್ಲಿ ಅಡಿಕೆ, ತೆಂಗು, ಬಾಳೆ ಬೆಳೆಯುವ ಜೊತೆಗೆ ಹೈನುಗಾರಿಕೆಯಲ್ಲಿ ತೊಡಗಿರುವ ನಮ್ಮ ಕುಟುಂಬವನ್ನು ಬಲವಂತದಿಂದ ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಈಚೆಗೆ ಸುದ್ದಿಗೋಷ್ಠಿಯಲ್ಲಿ ದೂರಿದರು.

‘34 ಗುಂಟೆ ಭೂ ಪ್ರದೇಶವನ್ನು ನಮ್ಮ ಕುಟುಂಬಕ್ಕೆ ಬಿಟ್ಟು ಕೊಡಬೇಕು ಎಂದು ಹೈಕೋರ್ಟ್‌ ಆದೇಶ ನೀಡಿದ್ದರೂ ಅದನ್ನು ತಾಲ್ಲೂಕು ಆಡಳಿತದ ಅಧಿಕಾರಿಗಳು ಪಾಲಿಸದೆ ಫಸಲು ನಾಶ ಮಾಡಿ ಅನ್ಯಾಯ ಎಸಗಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ಪ್ರಮುಖರಾದ ವಿಲ್ಫಿ ಡಿಸೋಜ, ಅಂತೋನಿ ಡಿಸೋಜ, ಲಾರೆನ್ಸ್ ಡಿಸೋಜ, ಸೆಲ್ಫಿ ಡಿಸೋಜ, ರುಸ್ತಿಕ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.